Haridasa Sahitya — Vyasadasa

Anyadevategalu karedoydu mannisi

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ

Composer: Vijaya Dasaru · Deity: Hari · Genre: Ugabhoga

Kannada lyrics

ಅನ್ಯದೇವತೆಗಳು ಕರೆದೊಯ್ದು ಮನ್ನಿಸಿ ರನ್ನದಂದಣವೇರಿ ಮೆರೆಸಲು ಮುನ್ನೇನು ಸುಖವಿನಿತಿಲ್ಲ ದುಃಖವಲ್ಲದೆ ಘೋರ ಗನ್ನ ಘಾತಕವು ಎಂದಿಗೆ ತಪ್ಪದು ಸನ್ನೆಯನು ಕೇಳಿ ಸರ್ವೋತ್ತಮ ಹರಿ ಉದಾ ಸಿನ್ನವನು ಮಾಡಿ ಕೆರ ಹೊಡಿಸಿದ ಸುಖ ವೇನು ಬಾರದು ಕಾಣೊ ಪನ್ನಗಾರಿಗಾದರು ಅನ್ಯಥಾ ಬಿಡದಿರು ವಿಜಯವಿಠಲನ್ನ||

Transliteration

Anyadevategalu karedoydu mannisi Rannadandanaveri meresalu Munnenu sukavinitilla du:Kavallade gora Ganna gatakavu endige tappadu Sanneyanu keli saruvottama hari uda- Sinavanu madi kera hodesida suka- Venu baradu kano pannagarigadaru Anyatha bidadiru vijayavithalanna Anyadevategalu karedoydu mannise |