Haridasa Sahitya — Vyasadasa
Anubhavadadugeya madi
ಅನುಭವದಡುಗೆಯ ಮಾಡಿ
Composer: Purandara Dasaru · Deity: Hari · Genre: Philosophy
Kannada lyrics
ಅನುಭವದಡುಗೆಯ ಮಾಡಿ ಅದ ಕ್ಕನುಭವಿಗಳು ಬಂದು ನೀವೆಲ್ಲ ಕೂಡಿ ।।ಪ।। ತನುವೆಂಬ ಭಾಂಡವ ತೊಳೆದು ಕೆಟ್ಟ ಮನದ ಚಂಚಲವೆಂಬ ಮುಸುರೆಯ ಕಳೆದು ಘನವಾಗಿ ಮನೆಯನ್ನು ಬಳಿದು ಅಲ್ಲಿ ಮಿನುಗುವ ತ್ರಿಗುಣವ ಒಲೆಗುಂಡನೆಡೆದು ।।೧।। ವಿರಕ್ತಿಯೆಂಬುವ ಮಡಿಯುಟ್ಟು ಪೂರ್ಣ ಹರಿಭಕ್ತಿಯೆಂಬ ನೀರನ್ನೆಸರಿಟ್ಟು ಅರಿವೆಂಬ ಬೆಂಕಿಯ ಕೊಟ್ಟು ಮಾಯಾ ಮರೆವೆಂಬ ಕಾಷ್ಟವ ಮುದದಿಂದ ಸುಟ್ಟು ।।೨।। ಶರಣೆಂಬೊ ಸಾಮಗ್ರಿ ಹೂಡಿ ಮೋಕ್ಷ ಪರಿಕರವಾದಂಥ ಪಾಕವ ಮಾಡಿ ಗುರು ಶರಣರು ಸವಿದಾಡಿ ನಮ್ಮ ಪುರಂ ದರವಿಠಲನ ಬಿಡದೆ ಕೊಂಡಾಡಿ ।।೩।।
Transliteration
Anubavadadugeya madi ada Kkanubavigalu bandu nivella kudi ||pa|| Tanuvemba bandava toledu ketta Manada cancalavemba musureya kaledu Ganavagi maneyannu balidu alli Minuguva trigunava olegundanededu ||1|| Viraktiyembuva madiyuttu purna Haribaktiyemba nirannesarittu Arivemba benkiya kottu maya Marevemba kashtava mudadimda suttu ||2|| Saranembo samagri hudi moksha Parikaravadantha pakava madi Guru sar…