Haridasa Sahitya — Vyasadasa

Antakana dutarige kincittu dayavilla

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ

Composer: Purandara Dasaru · Deity: Hari · Genre: Philosophy

Kannada lyrics

ಅಂತಕನ ದೂತರಿಗೆ ಕಿಂಚಿತ್ತು ದಯವಿಲ್ಲ ಚಿಂತೆಯನು ಬಿಟ್ಟು ಶ್ರೀ ಹರಿಯ ನೆನೆ ಮನವೆ ||ಪ|| ದಿವ ರಾತ್ರಿಯೆನ್ನದೆ ವಿಷಯಲಂಪಟನಾಗಿ ಸವಿಯೂಟಗಳನುಂಡು ಭ್ರಮಿಸ ಬೇಡ ಅವನ ಕೊಂದಿವನ ಕೊಂದರ್ಥವನು ಗಳಿಸುವರೆ ಜವನ ದೂತರು ಬರುವ ಹೊತ್ತ ನೀನರಿಯೆ || ಮೊನ್ನೆ ಮದುವೆಯಾದೆನೈ ಕರೆವುದೊಂದೆರಡೆಮ್ಮೆ ನಿನ್ನೆ ಕೊಂಡೆನು ಕ್ಷೇತ್ರ ಫಲವು ಬಹುದು ಹೊನ್ನು ಹಣವುಂಟೆನಗೆ ಸಾಯಲಾರೆನು ಎನಲು ಬೆನ್ನ ಬಿಡುವಳೆ ಮೃತ್ಯು ವ್ಯರ್ಥ ಜೀವಾತ್ಮ || ಹೊಸ ಮನೆಯ ಕಟ್ಟಿದೆನು ಗೃಹ ಶಾಂತಿ ಮನೆಯೊಳಗೆ ಬಸಿರಿ ಹೆಂಡತಿ ಮಗನ ಮದುವೆ ನಾಳೆ ಹಸನಾಗಿ ಇದೆ ಬದುಕು ಸಾಯಲಾರೆನು ಎನಲು ಕುಸುರಿದರಿಯದೆ ಬಿಡರು ಯಮನವರು ಆಗ || ಪುತ್ರ ಹುಟ್ಟಿದ ದಿವಸ ಹಾಲು ಊಟದ ಹಬ್ಬ…

Transliteration

Diva ratriyennade vishayalampatanagi Saviyutagalanundu Bramisa beda Avana kondivana kondarthavanu galisuvare Javana dutaru baruva hotta ninariye || Monne maduveyadenai karevudonderademme Ninne kondenu kshetra Palavu bahudu Honnu hanavuntenage sayalarenu enalu Benna biduvale mrutyu vyartha jivatma || Hosa maneya kattidenu gruha santi maneyolage Basiri hendati magana maduve nale Hasanagi ide baduku…