Haridasa Sahitya — Vyasadasa
Annadana Mahima sulaadhi
ಅನ್ನದಾನ ಮಹಿಮಾ ಸುಳಾದಿ
Composer: Vijaya Dasaru · Deity: Hari · Genre: Sulaadi
Kannada lyrics
ಅನ್ನದಾನ ಮಹಿಮಾ ಸುಳಾದಿ ಧ್ರುವತಾಳ ಉತ್ತಮರಿಗೆ ಒಂದು ತುತ್ತನ್ನ ದಾನದಿಂದ | ಇತ್ತವನ ಹತ್ತು ಹೆತ್ತು ಬಂದು | ಸಪುತ ಗೋತ್ರಾಕಿಲ ಹತ್ತಿ ಹೊಂದಿದವರು | ಸುತ್ತಣ ಪರಿವಾರ ಎತ್ತಲೆತ್ತ ಉಳ್ಳವರು | ಅತ್ಯಂತವಾದ ಪಾಪಮೊತ್ತದಾಸಕ್ತರಾಗಿ | ಮರ್ತ್ಯಲೋಕದಲಿ ಆಪತ್ತು ಬಡುತಲಿರೆದೆ | ಹೆತ್ತ ಜನನಿಯಂತೆ ಎತ್ತಿಕೊಂಡೊಯ್ದು, ಪುನರಾ | ವರ್ತಿ ಇಲ್ಲದ, ಲೋಕದತ್ತ ಸೇರಿಸುವುದು | ಎತ್ತಲೂ ಸರಿಗಾಣದೆ ಕ್ಷುದಾತುರರಾಗಿ ಬಂದ | ಸೋತ್ತಮರಿಗಿತ್ತ ಫಲ ಚಿತ್ತದಲ್ಲಿ ಎಣಿಸೆ | ನಿತ್ಯ ಕರುಣವ ಪಡೆದು ಸತ್ಪಥ ನಡೆಯುವರು || ೧ || ಮಟ್ಟತಾಳ ಹರಿಸರ್ವೋತ್ತಮನೆಂಬೋ ಜ್ಞಾನ | ಮರುತದೇವನ ಮತವೆಂಬೋ ಮತದಿ | ಹರಿಗುರು ಭಕುತಿ ಎಂಬೋ ಭಕುತಿ ನಿರಂತರದಲ್…
Transliteration
dhruva tala Uttamarige ondu tuttanna danadinda | Ittavana hattu hettu bandu | Saputa gotrakila hatti hondidavaru | Suttana parivara ettaletta ullavaru | Atyantavada papamottadasaktaragi | Martyalokadali Apattu badutalirede | Hetta jananiyante ettikomdoydu, punara | Varti illada, lokadatta serisuvudu | Ettalu sariganade kshudaturaragi banda | Sottamarigitta Pala chittadalli enise | Nitya karunava p…