Haridasa Sahitya — Vyasadasa

Anjaneya amara vandhitha

ಆಂಜನೇಯನೆ ಅಮರವಂದಿತ ಕಂಜನಾಭನÀ

Composer: Vadirajaru · Deity: Mukhyaprana / Vaayu / Hanuma / Bheema · Genre: Dasara Pada

Kannada lyrics

ಆಂಜನೇಯನೆ ಅಮರವಂದಿತ ಕಂಜನಾಭನÀ ದೂತನೆ || ಮಂಜಿನೋಲಗದಂತೆ ಶರಧಿಯ ದಾಂಟಿದ ಮಹಾಧೀರನೆ|| ಆಂಜನೇಯನೆ ನಿನ್ನಗುಣಪರಾಕ್ರಮ ಪೊಗಳಲಳವೆ ಪ್ರಖ್ಯಾತನೆಸಂಜೀವನವ ತಂದು ಕಪಿಗಳ ನಂಜು ಕಳೆದ ಪ್ರಖ್ಯಾತನೆ || ಕಾಮನಿಗ್ರಹನೆನಿಸಿ ಸುರರಭಿಮಾನಿ ದೇವತೆಯೆನಿಸಿದೆರಾಮಪಾದಕ್ಕೆರಗಿ ನಡೆದು ನಿಸ್ಸೀಮ ನೀನೆಂದೆನಿಸಿದೆ || ಸಿಂಧು ಹಾರಿದೆ ಶೀಘ್ರದಿಂದಲಿ ಬಂದು ಸೀತೆಗೆ ನಮಿಸಿದೆತಂದು ಮುದ್ರೆಯನಿತ್ತು ಮಾತೆಯ ಮನವ ಸಂತೊಷಪಡಿಸಿದೆ || ಜನಕತನುಜೆಯ ಮನವ ಹರುಷಿಸಿ ವನವ ಕಿತ್ತೀಡಾಡಿದೆದನುಜರನ್ನು ಸದೆದು ಲಂಕೆಯ ಅನಲಗಾಹುತಿ ಮಾಡಿದೆ || ಶ್ರೀರಾಮಕಾರ್ಯವ ವಹಿಸಿ ಅಕ್ಷಕುಮಾರನನು ಸಂಹರಿಸಿದೆಘೋರ ರಕ್ಕಸರೆಂಬುವರನು ಮಾರಿವಶವನು ಗೈಸಿದೆ || ಭರದಿ…

Transliteration

Anjaneyane amaravandita kanjanabana dutane ||pa.|| Manjinolagadante Saradhiya dantida mahadhirane ||a.pa.|| Anjaneyane ninnagunaparakrama pogalalalave prakyatanesanjivanava Tandu kapigala nanju kaleda prakyatane ||1|| Kamanigrahanenisi surarabimani devateyeniside rama padakkeragi Nadedu nissima ninendeniside ||2|| Sindhu haride sigradindali bandu sitege namisidetandu mudreyanittu Mateya manava san…