Haridasa Sahitya — Vyasadasa

Andu gokuladalli gopalakaragi animisharella salokyava padedaru

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು

Composer: Purandara Dasaru · Deity: Hari · Genre: Ugabhoga

Kannada lyrics

ಅಂದು ಗೋಕುಲದಲ್ಲಿ ಗೋಪಾಲಕರಾಗಿ ಅನಿಮಿಷರೆಲ್ಲ ಸಾಲೋಕ್ಯವ ಪಡೆದರು ಅಂದು ಗೋವುಗಳಾಗಿ ಸಾಧನವ ಮಾಡಿ ಸಾಮೀಪ್ಯವನ್ನು ಪಡೆದರು ಕೆಲರು ಅಂದು ನಿನ್ನನು ಕೂಡಿ ಆಡಿ ಸಾರೂಪ್ಯವೆಂಬ ಮುಕ್ತಿಯ ಪಡೆದರು ತತ್ವಾಭಿಮಾನಿಗಳು ಒಂದೊಂದು ಅವಯವದಲ್ಲಿ ಸಾಯುಜ್ಯವೆಂಬ ಮುಕುತಿಯ ಪಡೆದರು ಕೆಲವರು ಆಗ ಸಾಯುಜ್ಯ ಸರ್ವಾಂಗದಲಿ ಅಜಗಿತ್ತು ಸಲಹಿದೆ ಅನುಪಮ ಗುಣನಿಲಯ ಗುರುಪುರಂದರವಿಠಲ ಮುಖ್ಯಪ್ರಧಾನನಿಗೆ ||

Transliteration

Andu gokuladalli gopalakaragi animisharella salokyava padedaru Andu govugalagi sadhanava madi samipyavannu padedaru kelaru Andu ninnanu kudi adi sarupyavemba muktiya padedaru tatvabimanigalu Ondondu avayavadalli sayujyavemba mukutiya padedaru kelavaru Aga sayujya sarvangadali ajagittu salahide Anupama gunanilaya gurupurandara vittalamukyapradhananige ||