Haridasa Sahitya — Vyasadasa
Andu bahodu namaginde barali
ಅಂದು ಬಾಹೋದು ನಮಗಿಂದೇ ಬರಲಿ
Composer: Purandara Dasaru · Deity: Hari · Genre: Ugabhoga
Kannada lyrics
ಅಂದು ಬಾಹೋದು ನಮಗಿಂದೇ ಬರಲಿ ಇಂದು ಬಾಹುದು ನಮಗೀಗೇ ಬಾರಲಿ ಈಗ ಬಾಹೋದು ನಮಗೀಕ್ಷಣವೇ ಬರಲಿ ಪುರಂದರವಿಠಲನ ದಯವೊಂದು ನಮಗಿರಲಿ
Transliteration
Andu bahodu namaginde barali Indu bahudu namagige barali Iga bahodu namagikshanave barali Purandaravithalana dayavondu namagirali