Haridasa Sahitya — Vyasadasa
Ananta kalpakke ninna more biddavage
ಅನಂತ ಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ
Composer: Vijaya Dasaru · Deity: Hari · Genre: Ugabhoga
Kannada lyrics
ಅನಂತ ಕಲ್ಪಕ್ಕೆ ನಿನ್ನ ಮೊರೆ ಬಿದ್ದವಗೆ ಖಿನ್ನವಿಲ್ಲವೆಂಬುದ ಕೇಳಿ ಬಲ್ಲೆ ಚಿಣ್ಣ ಧ್ರುವ ಪ್ರಹ್ಲಾದ ಮೊದಲಾದ ಭಕುತರ ಘನ್ನತೆ ಏನೆಂಬೆ ಲೋಕದಲ್ಲಿ ಮನ್ನಿಸು ಮಹರಾಯ ವಿಜಯವಿಠಲರೇಯ ಬಿನ್ನಹ ಕೈಕೊಂಡು ಭಕುತನ್ನ ಪಾಲಿಸು||
Transliteration
Ananta kalpakke ninna more biddavage | Kinnateyillavembuda keli balle | Chinna dhruva prahlada modalada Baktara | Ganate enembe lokadalli | Manniso maharaya vijayavithalareya | Binnapa kaikondu Baktana paliso |