Haridasa Sahitya — Vyasadasa
Ananda mayage(Aarathi song)
ಆನಂದಮಯಗೆ ಚಿನ್ಮಯಗೆ ಆ-
Composer: Vadirajaru · Deity: Narayana · Genre: Aarathi
Kannada lyrics
ಆನಂದಮಯಗೆ ಚಿನ್ಮಯಗೆ ಆ- ದಿನಾರಾಯಣಗಾರತಿ ಎತ್ತಿರೆ || ವೇದವ ತಂದು ಬೆಟ್ಟವ ಪೊತ್ತು ಧರಣಿಯ ಸಾಧಿಸಿ ಕಂಬದಿ ಬಂದವಗೆ ಭೂದಾನವ ಬೇಡಿ ನೃಪರ ಸಂಹರಿಸಿದ ಆದಿಮೂರುತಿಗಾರತಿ ಎತ್ತಿರೆ ||1|| ಇಂದುವದನೆ ಸಹಿತ ಅರಣ್ಯದೊಳಗಾಡಿ ನಂದಗೋಕುಲದಲ್ಲಿ ನಲಿದವಗೆ ಮಂದಗಮನೆಯರ ಮುಂದೆ ನಿರ್ವಾಣದಿ ನಿಂದ ಮೂರುತಿಗಾರತಿ ಎತ್ತಿರೆ ||2|| ತುರಗವನೇರಿ ದುಷ್ಟರ ಸೀಳಿ ಭಕ್ತರ ಪೊರೆವ ಮಂಗಳ ಹಯವದನನಿಗೆ ವರದ ಯಾದವಗಿರಿ ಚೆಲುವನಾರಾಯಣನ ಚರಣಕಮಲಕಾರತಿ ಎತ್ತಿರೆ ||3||
Transliteration
aanandamayage chinmayage | shreemannaaraayanage aarati ettire || pa || vedava tandu bettava pottu dharaniya | saadhisi kambadol udisidavage | bhoodaanava bedi nrupara samharisida | aadi moorutige aarati ettire || 1 || induvadane seete sahitalaranyadi | nandagokuladolu beledavage | mandagamaneyara munde nirvaanadi | ninta moorutige aarati ettire || 2 || turagavaneri daityara seeli bhaktara | poreda…