Haridasa Sahitya — Vyasadasa
Ananda Ananda matte paramananda
ಆನಂದ ಆನಂದ ಮತ್ತೆ ಪರಮಾನಂದ
Composer: Vijaya Dasaru · Deity: Hari · Genre: Bhakti
Kannada lyrics
ಆನಂದ ಆನಂದ ಮತ್ತೆ ಪರಮಾನಂದ ।।ಪ।। ಆ ನಂದನ ನಂದನೊಲಿಯೆ ಏನಂದದ್ದೆ ವೇದವೃಂದಾ ।।ಅ.ಪ।। ಆ ಮೊದಲು ಕ್ಷ ಕಾರಾಂತ ಈ ಮಹಾ ವರ್ಣಗಳೆಲ್ಲ ಸ್ವಾಮಿಯಾದ ವಿಷ್ಣುವಿನ ನಾಮವೆಂದು ತಿಳಿದವರಿಗೆ ।।೧।। ಪೋಪುದು ಬರುತಿಪ್ಪುದು ಕೋಪ ಮತ್ತೆ ಶಾಂತಿ ಮಾಡುವುದು ರೂಪ ಲಾವಣ್ಯವು ಹರಿವ್ಯಾಪಾರವೆಂದರಿತವರಿಗೆ ।।೨।। ಜಲ ಕಾಷ್ಠ ಶೈಲ ಗಗನ ನೆಲ ಪಾವಕ ವಾಯು ತರು ಫಲ ಪುಷ್ಪ ಬಳ್ಳಿಲಿ ಹರಿ ಒಳಗೆ ವ್ಯಾಪ್ತನೆಂದವಗೆ ।।೩।। ತಾರೋ ಬಾರೋ ಬೀರೊ ಸಾರೊ ಮಾರೊ ತೋರೊ ಹಾರೊ ಹೋರೊ ಸೇರೋ ತೋರೆಂಬುದೀಶಪ್ರೇರಣೆ ಎಂದವರಿಗೆ ।।೪।। ಮಧ್ವಶಾಸ್ತ್ರ ಪ್ರವಚನ ಮುದ್ದುಕೃಷ್ಣನ ದರುಶನ ಸಿದ್ಧ ವಿಜಯವಿಠಲನ್ನ ಪೊಂದಿ ಕೊಂಡಾಡುವವರಿಗೆ ।।೫।।
Transliteration
Ananda Ananda matte paramananda ||pa|| A nandana nandanoliye Enandadde vedavrunda ||a.pa|| A modalu ksha karanta I maha varnagalella Svamiyada vishnuvina namavendu tilidavarige ||1|| Popudu barutippudu kopa matte santhi maduvudu Rupa lavanyavu harivyaparavendaritavarige ||2|| Jala kashtha Saila gagana nela pavaka vayu taru Pala pushpa ballili hari olage vyaptanendavage ||3|| Taro baro biro saro ma…