Haridasa Sahitya — Vyasadasa
Anaghanendom’me neneda mānava pāpa-
ಅನಘನೆಂದೊಮ್ಮೆ ನೆನೆದ ಮಾನವ ಪಾಪ-
Composer: Jagannatha Dasaru · Deity: Hari · Genre: Ugabhoga
Kannada lyrics
ಅನಘನೆಂದೊಮ್ಮೆ ನೆನೆದ ಮಾನವ ಪಾಪ- ವನದಿ ದಾಟುವ ಬಹುವೇಗದಿಂದ ಜನನ ಮರಣ ಭಯವಿನಿತಿಲ್ಲ ಅವನೇ ಸಜ್ಜನ ಶಿರೋಮಣಿ ಕಾಣೋ ಸರ್ವರೊಳು ಜನಕ ಜನನಿ ಮೊದಲಾದ ನೂರೊಂದು ಕುಲವ ಪಾವನ ಮಾಡುವನು ಪ್ರತಿದಿನದಲಿ ವನಿತಾದಿ ವಿಷಯಂಗಳನುಭವಿಸುತz ತನ್ನ ಮನೆಯೊಳಿರಲವ ಜೀವನ್ಮುಕ್ತನೋ ಸನಕಾದಿಮುನಿಗಳ ಮನಕೆ ನಿಲುಕದಿಪ್ಪ ಘನಮಹಿಮನೇ ಬಂದು ಕುಣಿವ ಮುಂದೆ ಹನುಮವಂದಿತ ಜಗನ್ನಾಥವಿಠಲರೇಯ ಅನಿಮಿತ್ತ ಬಂಧು ತಾ ಆವಾವ ಕಾಲದಲ್ಲಿ
Transliteration
Anaghanendom’me neneda mānava pāpa- vanadi dāṭuva bahuvēgadinda janana maraṇa bhayavinitilla avanē sajjana śirōmaṇi kāṇō sarvaroḷu janaka janani modalāda nūrondu kulava pāvana māḍuvanu pratidinadali vanitādi viṣayaṅgaḷanubhavisutaz tanna maneyoḷiralava jīvanmuktanō sanakādimunigaḷa manake nilukadippa ghanamahimanē bandu kuṇiva munde hanumavandita jagannāthaviṭhalarēya animitta bandhu tā āvāva kāla…