Haridasa Sahitya — Vyasadasa
Amma nimma manegalalli
ಅಮ್ಮ ನಿಮ್ಮ ಮನೆಗಳಲ್ಲಿ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಅಮ್ಮ ನಿಮ್ಮ ಮನೆಗಳಲ್ಲಿ ನಮ್ಮ ರಂಗನ ಕಂಡಿರೇನಮ್ಮ ||ಪಲ್ಲವಿ|| ಬ್ರಹ್ಮ ಮೂರುತಿ ನಮ್ಮ ಕೃಷ್ಣನು ನಿಮ್ಮ ಕೇರಿಯೊಳಿಲ್ಲವೆ ||ಅನುಪಲ್ಲವಿ || ಕಾಶಿ ಪೀತಾಂಬರ ಕೈಯಲ್ಲಿ ಕೊಳಲು ಪೂಸಿದ ಶ್ರೀ ಗಂಧ ಮೈಯೊಳಗಮ್ಮ ಲೇಸಾಗಿ ತುಲಸಿಯ ಮಾಲೆಯ ಧರಿಸಿದ ವಾಸುದೇವನು ಬಂದ ಕಾಣಿರೇನೆ ||೧|| ಕರದಲ್ಲಿ ಕಂಕಣ ಬೆರಳಲ್ಲಿ ಉಂಗುರ ಕೊರಳಲ್ಲಿ ಹಾಕಿದ ಹುಲಿಯುಗುರಮ್ಮ ಅರಳೆಲೆ ಕನಕ ಕುಂಡಲ ಕಾಲಲನುಗೆ ಉರಗ ಶಯನ ಬಂದ ಕಂಡಿರೇನೆ ||೨|| ಕುಂಕುಮ ಕಸ್ತೂರಿ ಕರಿ ನಾಮ ತಿದ್ದಿ ಶಂಖ ಚಕ್ರಗಳ ಧರಿಸಿಹನಮ್ಮ ಬಿಂಕದಿಂದಲಿ ಕೊಳಲೂದುತ್ತ ಪಾಡುತ್ತ ಪಂಕಜಾಕ್ಷನು ಬಂದ ಕಾಣಿರೇನೆ ||೩|| ಮಾವನ ಮಡುಹಿದ ಶಕಟನ ಕೆಡಹಿದ ಗೋವರ್ಧನ ಗಿರಿ ಎತ್ತಿದನಮ್ಮ ಆವ ತಾಯಿಗ…
Transliteration
Amma Nimma Manegalalli Namma Rangana Kandirenamma Brahma Muruti Namma Krsnanu Nimma Keriyolillave Kashi Pitambara Kaiyalli Kolalu Pusida Shri Gandha Maiyolagamma Lesagi Tulasiya Maleya Dharisida Vasudevanu Banda Kanirenamma ||1|| Karadalli Kankana Beralalli Ungura Koralalli Hakida Huliyuguramma Aralele Kanaka Kundala Kalalalanduge Uraga Shayana Banda Kandirene||2|| Kumkuma Kasturi Hari Nama Tiddi…