Haridasa Sahitya — Vyasadasa

Amma lakumi devi

ಅಮ್ಮಾ ಲಕುಮಿದೇವಿ ನಿಮ್ಮರಸನ

Composer: Pradyumna Teertharu · Deity: Lakshmi Devi · Genre: Bhakti

Kannada lyrics

ಅಮ್ಮಾ ಲಕುಮಿದೇವಿ ನಿಮ್ಮರಸನ ತೋರೆ ಸುಮ್ಮನೆ ಬಿಡುವದು ಸಮ್ಮತವೇ ನಿನಗೆ ಪ ಹೆತ್ತ ಬಾಲರು ಮಂದಮತಿಗಳಾದರೆ ತಾಯಿ ಸತ್ತು ಹೋಗಲಿ ಎಂದು ಎತ್ತದೆ ಬಿಡುವೊಳೆ 1 ನಿಮ್ಮ ಮಾತಿಗೆ ಹರಿ ಸಮ್ಮತನಾಗುವ ಕುಮತಿಗಳೆಣಿಸದೆ ರಾಮ ಮೂರುತಿ ತೋರೆ2 ಸಿಂಧುತನಯೆ ಎನ್ನ ಬಂಧ ಬಿಡಿಸಿ ಬೇಗ ನಂದ ಕಂದನ ಪಾದ ಪೊಂದಿರುವಂತೆ ಮಾಡೆ 3 ತತ್ವೇಶರೆಲ್ಲರೂ ನಿತ್ಯಾಧೀನರು ನಿಮಗೆ ಭೃತ್ಯಗೆ ನಿಜ ಹರಿ ಭಕ್ತಿ ಕೊಡುವಂತೆ ಪೇಳೆ 4 ಎನ್ನಲಿರುವ ಹೀನರೋಡಿಸಿ ಬೇಗ ಪನ್ನಗಾಚಲವಾಸ ಶ್ರೀ ನರಹರಿ ತೋರೆ 5

Transliteration

Amma lakumidevi nimmarasana toresummane Biduvadu sammatave ninage ||pa|| Hetta balaru mandamatigaladare tayi Sattu hogali endu ettade biduvole ||1|| Nimma matige hari sammatanaguva Kumatigalenisade rama muruti tore||2|| Sindhutanaye enna bamdha bidisi bega Nanda kandana pada pondiruvante made ||3|| Tatvesarellaru nityadhinaru nimage Brutyage nija hari Bakti koduvante pele ||4|| Ennaliruva hinarodi…