Haridasa Sahitya — Vyasadasa

Ambiga na ninna nambide

ಅಂಬಿಗ ನಾ ನಿನ್ನ ನಂಬಿದೆ

Composer: Purandara Dasaru · Deity: Hari · Genre: Philosophy

Kannada lyrics

ಅಂಬಿಗ ನಾ ನಿನ್ನ ನಂಬಿದೆ ಜಗ ದಂಬಾರಮಣ ನಿನ್ನ ನಂಬಿದೆ ||ಪ|| ತುಂಬಿದ ಹರಿಗೋಲಂಬಿಗ ಅದ ಕೊಂಭತ್ತು ಛಿದ್ರ ನೋಡಂಬಿಗ ಸಂಭ್ರಮದಿಂದ ನೀನಂಬಿಗ ಅದ ರಿಂಬು ನೋಡಿ ನಡೆಸಂಬಿಗ ||೧|| ಹೊಳೆಯ ಭರವ ನೋಡಂಬಿಗ ಅದಕೆ ಸೆಳವು ಘನವಯ್ಯ ಅಂಬಿಗ ಸುಳಿಯೊಳು ಮುಳುಗಿದೆ ಅಂಬಿಗ ಎನ್ನ ಸೆಳೆದುಕೊಂಡೊಯ್ಯೊ ನೀನಂಬಿಗ ||೨|| ಆರು ತೆರೆಯ ನೋಡಂಬಿಗ ಅದು ಮೀರಿ ಬರುತಲಿದೆ ಅಂಬಿಗ ಯಾರಿಂದಲಾಗದು ಅಂಬಿಗ ಅದ ನಿ ವಾರಿಸಿ ದಾಟಿಸೋ ಅಂಬಿಗ ||೩|| ಹೊತ್ತು ಹೋಯಿತು ನೋಡಂಬಿಗ ಅಲ್ಲಿ ಮತ್ತೈವರೀರ್ವರು ಅಂಬಿಗ ಒತ್ತಿನಡೆಸು ನೋಡಿ ಅಂಬಿಗ ಎನ್ನ ಸತ್ಯಲೋಕಕ್ಕೆ ಒಯ್ಯೊ ಅಂಬಿಗ ||೪|| ಸತ್ವಪಥದೊಳಗೆ ಅಂಬಿಗ ಪರಾ ಭಕ್ತಿ ಹುಟ್ಟನು ಹಾಕಿ ಅಂಬಿಗ ಮುಕ್ತಿದಾಯಕ…

Transliteration

Ambiga na ninna nambide jaga Dambaramana ninna nambide ||pa|| Tumbida harigolambiga ada Kombattu Cidra nodambiga Sambramadimda ninambiga ada Rimbu nodi nadesambiga ||1|| Holeya Barava nodambiga adake Selavu Ganavayya ambiga Suliyolu mulugide ambiga enna Seledukomdoyyo ninambiga ||2|| Aru tereya nodambiga adu Miri barutalide ambiga Yarindalagadu ambiga ada ni Varisi datiso ambiga ||3|| Hottu hoyitu…