Haridasa Sahitya — Vyasadasa
Ambe kalikuthali
ಅಂಬೆಗಾಲಿಕ್ಕುತಲಿ ಬಂದ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಅಂಬೆಗಾಲಿಕ್ಕುತಲಿ ಬಂದ ಗೋವಿಂದ ||pa|| ಅಂಬುಜನಾಭ ದಯದಿಂದ ಎನ್ನ ಮನೆಗೆ||a.pa|| ಜಲಚರ ಜಲವಾಸ ಧರಣಿಧರ ಮೃಗರೂಪ ನೆಲನಳೆದು ಮೂರಡಿ ಮಾಡಿಬಂದ ಕುಲನಾಶ ವನವಾಸ ನವನೀತಚೋರನಿವ ಲಲನೆಯರ ವ್ರತಭಂಗ ವಾಹನ ತುರಂಗ || 1|| ಕಣ್ಣ ಬಿಡುವನು ತನ್ನ ಬೆನ್ನ ತಗ್ಗಿಸುವನು ಮಣ್ಣು ಕೆದರಿ ಕೋರೆ ಬಾಯ ತೆರೆದು ಚಿಣ್ಣ ಭಾರ್ಗವ ಲಕ್ಷ್ಮಣನಣ್ಣ ಬೆಣ್ಣೆಯ ಕಳ್ಳ ಮನೆಯ ಬಿಟ್ಟು ಕುದುರೆಯನೇರಿದ || 2|| ನೀರ ಪೊಕ್ಕನು ಗಿರಿಯ ನೆಗಹಿ ಧರಣಿಯ ತಂದು ನರಮೃಗ ಬಲಿಬಂಧ ಕೊರಳುಗೊಯಿಕ ಶೂರ ಮುರಿದೊರಳೆಳೆದು ನಿರವಾಣಿ ಹಯಹತ್ತಿ ಪುರಂದರ ವಿಟ್ಠಲ ಮನೆಗೆ ತಾ ಬಂದ ಚರಣ || 3 ||
Transliteration
Ambe kalikkuthalli bandha Anbuja nabha dayadinda ennamanege || Jalacara jalavasa dharanidhara mrugarupa Nelanaledu muradi madi banda Kulanasha vanavasa navanita coraniva Lalaneyara vrata bhanga vahana turanga ||1|| Kannabiduvanu tanna benna taggisuvanu Mannu kedari kore baya taredu Cinna bhargava lakshmanananna benneya kalla Manava bittu kudureyanerida ||2|| Nira pokkanu giriyanegehi dharaniya tan…