Haridasa Sahitya — Vyasadasa

Ambaradalavanu ravisasi ballaru

ಅಂಬರದಾಳವನು ರವಿಶಶಿ ಬಲ್ಲರು

Composer: Purandara Dasaru · Deity: Hari · Genre: Ugabhoga

Kannada lyrics

ಅಂಬರದಾಳವನು ರವಿಶಶಿ ಬಲ್ಲರು ಅಂತರಲಾಡುವ ಪಕ್ಷಿ ತಾ ಬಲ್ಲುದೇ? ಜಲದ ಪ್ರಮಾಣ ತಾವರೆಗಲ್ಲದೆ ಮ್ಯಾಲಿರುವ ಗಿಡಗಳು ತಾವು ಬಲ್ಲವೇ ? ಸುರತ ಸುಖವನೆಲ್ಲ ಯುವಕನಲ್ಲದೆ ಬಾಲಕತನದವರು ತಾವು ಬಲ್ಲರೇ? ದೇವ ನಿನ್ನ ಮಹಿಮೆಯ ಜ್ಞಾನಿಗಳ ಭಕ್ತಿಯ ನೀನೇ ಬಲ್ಲಯ್ಯಾ ಪುರಂದರವಿಠಲ

Transliteration

Ambaradalavanu ravisasi ballaru Antaraladuva pakshi ta ballude? Jalada pramana tavaregallade Myaliruva gidagalu tavu ballave ? Surata sukavanella yuvakanallade Balakatanadavaru tavu ballare? Deva ninna mahimeya J~janigala Baktiya nine ballayya purandaravithala