Haridasa Sahitya — Vyasadasa
Amba ni huva paalise vara
ಅಂಬಾ ನೀ ಹೂವ ಪಾಲಿಸೆ ವರ
Composer: Harapanahalli Bheemavvanavaru · Deity: Gouri / Parvati Devi · Genre: Bhakti
Kannada lyrics
ಅಂಬಾ ನೀ ಹೂವ ಪಾಲಿಸೆ ವರ ನೀಡೆ ಶ್ರೀ ಜಗ- ದಂಬಾ ನೀ ಹೂವ ಪಾಲಿಸೆ ಅಂಬಾ ನೀ ಹೂವ ಪಾಲಿಸೆ ಶಂಭು ಶಂಕರನ ರಾಣಿ ರಂಭೆ ಪಾರ್ವತಿ ನಿನ್ನ ಪಾದಾಂಬುಜಕ್ಕೆರಗುವೆ ||pa|| ಬಳೆಯು ಕರಿಯಮಣಿ ಕೊರಳÀ ಮಂಗಳ ಸೂತ್ರ ಸ್ಥಿರವಾಗಿಯಿರುವಂತೆ ಸರ್ವ ಸಂಪತ್ತು ನೀಡಂಬಾ ||1|| ಮಕ್ಕಳು ಮನೆ ಭಾಗ್ಯ ತೊಟ್ಟಿಲು ತೂಗುವಂತೆ ಮೃಷ್ಟಾನ್ನ ದಾನ ಮಾಡಲಿಷ್ಟಾರ್ಥದ್ವರಗಳ ಅಂಬಾ||2|| ರುದ್ರನ ಸತಿಯಳೆ ಬುದ್ಧ್ಯಾತ್ಮಳೆನಿಸುವಿ ಭದ್ರೆ ನಿನ್ನಯ ಮುಡಿಯಲ್ಲಿದ್ದ ಮಲ್ಲಿಗೆಯ ನೀಡಂಬಾ ||3|| ಇಂತು ಬೇಡುವೆ ನಿನ್ನ ಸಂಪಿಗೆ ಮುಡಿಮ್ಯಾಲಿ- ದ್ದಂಥ ಕುಸುಮದೊಳು ಶಾವಂತಿಗೆ ಸರವ ||4| ಭೀಮೇಶಕೃಷ್ಣನ ನಿಜ ಪಾದಭಜಕಳೆ ನೀ ದಯದಿಂದ ಧರ್ಮ ಕಾಮ್ಯಾರ್ಥದ್ವರಗಳ ||5|…
Transliteration
aMbA nI hUva pAlise vara nIDe SrI jaga- daMbA nI hUva pAlise aMbA nI hUva pAlise SaMBu Sankarana rANi raMBe pArvati ninna pAdAMbujakkeraguve ||pa|| baLeyu kariyamaNi koraLaÀ mangaLa sUtra sthiravAgiyiruvaMte sarva saMpattu nIDaMbA ||1|| makkaLu mane BAgya toTTilu tUguvante mRuShTAnna dAna mADaliShTArthadvaragaLa aMbA||2|| rudrana satiyaLe buddhyAtmaLenisuvi Badre ninnaya muDiyallidda malligeya nID…