Haridasa Sahitya — Vyasadasa
Aluvadyatako ranga attaranjipa gumma
ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ
Composer: Purandara Dasaru · Deity: Krishna / Govinda / Mukunda · Genre: Bhakti
Kannada lyrics
ಅಳುವದ್ಯಾತಕೊ ರಂಗ ಅತ್ತರಂಜಿಪ ಗುಮ್ಮ||pa|| ಪುಟ್ಟಿದೇಳು ದಿವಸದಲಿ ದುಷ್ಟ ಪೂತನಿಯ ಕೊಂದೆ ಮುಟ್ಟಿ ವಿಷದ ಮೊಲೆಯುಂಡ ಕಾರಣ ದೃಷ್ಟಿ ತಾಕಿತೆ ನಿನಗೆ ರಂಗಯ್ಯ||1|| ಬಾಲಕತನದಿ ಗೋಪಾಲಕರೊಡಗೂಡಿ ಕಾಳಿಂದಿ ಮಾಡುವನು ಕಲಕಿದ ಕಾರಣ ಕಾಲು ಉಳುಕಿತೆ ನಿನಗೆ ರಂಗಯ್ಯ||2|| ತುರುವ ಕಾಯಲು ಪೋಗೆ ಭರದಿ ಇಂದ್ರ ಮಳೆಗರೆಯೆ ಬೆರಳಲಿ ಬೆಟ್ಟವನೆತ್ತಿದ ಕಾರಣ ಬೆರಳು ಉಳುಕಿತೆ ನಿನಗೆ ರಂಗಯ್ಯ||3|| ವಾಸುದೇವ ಸುತನಾಗಿ ಅಸುರರೆಲ್ಲರ ಮಡುಹಿ ಹೆಸರಿನ ಮಲ್ಲರ ಮಡುಹಿದ ಕಾರಣ ಕಿಸಿರು ತಾಕಿತೆ ನಿನಗೆ ರಂಗಯ್ಯ||4|| ಶರಣು ವೇಲಾಪುರದ ಚೆಲುವ ಚೆನ್ನಿಗರಾಯ ಪರಿಪರಿ ವಿಧದಿಂದ ಶರಣರ ಪೊರೆಯುವ ವರದ ಪುರಂದರವಿಠಲರಾಯ ||5||
Transliteration
Aluvadyatako ranga attaranjipa gumma||pa|| Puttidelu divasadali dushta putaniya konde Mutti vishada moleyunda karana Drushti takite ninage rangayya||1|| Balakatanadi gopalakarodagudi Kalindi maduvanu kalakida karana Kalu ulukite ninage rangayya||2|| Turuva kayalu poge Baradi indra malegareye Beralali bettavanettida karana Beralu ulukite ninage rangayya||3|| Vasudeva sutanagi asurarellara maduhi He…