Haridasa Sahitya — Vyasadasa

Alpa manavarigalparisa

ಅಲ್ಪ ಮಾನವರಿಗಾಲ್ಪರಿಸ

Composer: Jagannatha Dasaru · Deity: Raghavendra Teertharu · Genre: Philosophy

Kannada lyrics

ಅಲ್ಪ ಮಾನವರಿಗಾಲ್ಪರಿಸ ಬ್ಯಾಡೆಲೊ ಗುರುವೆ || ಪ || ಕಲ್ಪ ಕಲ್ಪದಲಿ ಅಹಿತಲ್ಪ ಹರಿಯ | ಸಂ | ಕಲ್ಪವನನುಸರಿಸಿ ನಡೆವೊ ಸ್ವಮಿ | ಕಲ್ಪತರು ನೀನೆಂದು ಮನದಲಿ ಸಂಕಲ್ಪವಾದರು | ವಿ | ಕಲ್ಪನಾಗದವನ ಅಸ್ಮದ್ ಗುರುವೆ || ೧ || ನಿನ್ನ ಧ್ಯಾನವಗೈದು ನಿನ್ನ ಸೇವೆಯನು ಮಾಡಿ | ನಿನ್ನ ಪಾದ ಪದುಮವಾಶ್ರಯವ ಮಾಡಿ | ಮನದಲಿ ಭಜಿಸುತ ನನ್ಯಶರನನು ಯೆನಿಸಿ | ಅನ್ಯ ಜನರನು ಯಾಚಿಸದಿಪ್ಪ ನರನ || ೨|| ನಿನ್ನ ಧ್ಯಾನವ ಬಿಟ್ಟು ನಿನ್ನ ಧ್ಯಾನವ ತ್ಯಜಿಸಿ | ನಿನ್ನ ನಾಮ ಸ್ಮರಣೆ ಮಾಡದೆ | ಅನ್ಯ ದೇವರ ಸೇವೆ ಮನ್ನ ಪೂರ್ವಕ ಮಾಡಿ | ಬನ್ನ ಬಡುತಿಹ್ಯಾರೊ ಭವದೊಳಗೆ ಇನ್ಥ || ೩ || ಮಧ್ವ ಮತದಲಿ ಪುಟ್ಟಿ ಮಧ್ವ ಶಾಸ್ತ್ರವ ಬಿಟ್ಟು | ಮಧ್ವ ಮತವ…

Transliteration

Alpa manavarigalparisa byadelo guruve || pa || Kalpa kalpadali ahitalpa hariya | san | Kalpavananusarisi nadevu svami | Kalpataru ninemdu manadali sankalpavadaru | vi | Kalpanagadavana asmadguruve || 1 || Ninna dhyanavagaidu ninna seveyanu madi | Ninna pada padumavasrayava madi | Manadali Bajisuta nanyasarananu yenisi | Anya janaranu yacisadippa narana || 2|| Ninna dhyanava bittu ninna dhyanava ty…