Haridasa Sahitya — Vyasadasa
Allide nammane illi bande
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ
Composer: Purandara Dasaru · Deity: Hari · Genre: Philosophy
Kannada lyrics
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ, ಅಲ್ಲಿದೆ ನಮ್ಮ ಮನೆ ||ಪ|| ಕದಬಾಗಿಲಿರಿಸಿಹ ಕಳ್ಳ ಮನೆ ಇದು ಮುದದಿಂದ ಓಲ್ಯಾಡೊ ಸುಳ್ಳು ಮನೆ ವೈಕುಂಠವೆಂಬುದೆ ನಮ್ಮ ಸ್ವಂತ ಮನೆ ಇದ್ದು ಇಲ್ಲದೆ ಹೋಗೋ ಕನಸಿನ ಮನೆ ಇದು ||೧|| ಮಾಳಿಗೆಮನೆಯೆಂದು ನೆಚ್ಚಿ ಕೆಡಲು ಬೇಡ ಕೇಳಯ್ಯ ಹರಿಕಥೆ ಶ್ರವಣಂಗಳ ನಾಳೆ ಯಮದೂತರು ಬಂದೆಳೆದೊಯ್ಯುವಾಗ ಮಾಳಿಗೆ ಮನೆ ಸಂಗಡ ಬಾರದಯ್ಯ ||೨|| ಮಡದಿಮಕ್ಕಳು ಎಂಬೋ ಹಂಬಲ ನಿನಗ್ಯಾಕೋ ಕಡುಗೊಬ್ಬುತನದಲಿ ಕೊಬ್ಬಿನಡೆಯದಿರೋ ಒಡೆಯ ಶ್ರೀಪುರಂದರವಿಠಲರಾಯನ ಧೃಡಭಕ್ತಿಯಿಂದಲಿ ಭಜಿಸಿಕೋ ಮನುಜ ||೩||
Transliteration
Allide nammane, illi bande summane, Allide namma mane ||pa|| Kadabagilirisiha kalla mane idu Mudadimda olyado sullu mane Vaikunthavembude namma svanta mane Iddu illade hogo kanasina mane idu ||1|| Maligemaneyendu necci kedalu beda Kelayya harikathe sravanangala Nale yamadutaru bamdeledoyyuvaga Malige mane samgada baradayya ||2|| Madadimakkalu embo hambala ninagyako Kadugobbutanadali kobbinadeyadir…