Haridasa Sahitya — Vyasadasa

Alli vanagaluntu aprakrutavada palapushpagalindopputtalihudu

ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು

Composer: Purandara Dasaru · Deity: Hari · Genre: Ugabhoga

Kannada lyrics

ಅಲ್ಲಿ ವನಗಳುಂಟು ಅಪ್ರಾಕೃತವಾದ ಫಲಪುಷ್ಪಗಳಿಂದೊಪ್ಪುತ್ತಲಿಹುದು ಪಕ್ಷಿಜಾತಿಗಳುಂಟು ಅತಿವಿಲಕ್ಷಣವಾದ ಕಿಲಕಿಲ ಶಬ್ದವು ರಂಜಿಸುವ ನುಡಿಗಳು ಮುಕುತರು ಬಂದು ಜಲಕ್ರೀಡೆಗಳ ಮಾಡಿ ಕುಳಿತು ಸುಖಿಪರು ಇಂಥಾ ಸುಖ ಬೇಕಾದರೆ ನೀಚವೃತ್ತಿಯ ಬಿಟ್ಟು ಪರಲೋಕ ಸುಖವೀವ ಪುರಂದರವಿಠಲನ ಭಜಿಸು ಜೀವ ||

Transliteration

Alli vanagaluntu aprakrutavada palapushpagalindopputtalihudu Pakshijatigaluntu ativilakshanavada kilakila Sabdavu ranjisuva nudigalu Mukutaru bandu jalakridegala madi kulitu sukiparu Intha suka bekadare nicavruttiya bittu Paraloka sukaviva purandaravithalana Bajisu jiva ||