Haridasa Sahitya — Vyasadasa
Alli nodalu Raama
ಅಲ್ಲಿ ನೋಡಲು ರಾಮ
Composer: Purandara Dasaru · Deity: Rama · Genre: Bhakti
Kannada lyrics
ಅಲ್ಲಿ ನೋಡಲು ರಾಮ ಇಲ್ಲಿ ನೋಡಲು ರಾಮ ಎಲ್ಲಿಲ್ಲಿ ನೋಡಿದರೂ ಅಲ್ಲಿ ಶ್ರೀರಾಮ||ಪಲ್ಲವಿ|| ರಾವಣನ ಮೂಲಬಲ ಕಂಡು ಕಪಿಸೇನೆ ಆವಾಗಲೇ ಬೆದರಿ ಓಡಿದವು ಈ ವೇಳೆ ನರನಾಗಿ ಇರಬಾರದೆಂದೆಣಿಸಿ ದೇವ ರಾಮಚಂದ್ರ ಜಗವೆಲ್ಲಾ ತಾನಾದ||1|| ಅವನಿಗೆ ಇವ ರಾಮ ಇವನಿಗೆ ಅವ ರಾಮ ಅವನಿಯೊಳೀಪರಿ ರೂಪವುಂಟೇ ಲವದಲ್ಲಿ ಅಸುರ ದುರುಳರೆಲ್ಲರು ಅವರವರು ಹೊಡೆದಾಡಿ ಹತರಾಗಿಹೋದರು||2|| ಹನುಮದಾದಿ ಸಾಧು ಜನರು ಅಪ್ಪಿಕೊಂಡು ಕುಣಿಕುಣಿದಾಡಿದರು ಹರುಷದಿಂದ ಕ್ಷಣದಲ್ಲಿ ಪುರಂದರ ವಿಠಲರಾಯನು ಕೊನೆಗೊಡೆಯನು ತಾನೊಬ್ಬನಾಗಿ ನಿಂತ||3||
Transliteration
Alli nodalu rama illi nodalu rama ellalli nodidaralli shri rama Ravana moolabala kandu kapisene avagale bedari odidavu I vele naranagi irabaradendenisi deva ramacandra jagavella tanada||1|| Avanige iva rama ivanige ava rama avaniyoli pari rupavunte Lavamatradi asura durullellaru avaravar hodedadi hataragi podaru||2|| Hanumadadi sadhu janaru appikondu kunikunidadidaru harusadinda Ksanadalli puranda…