Haridasa Sahitya — Vyasadasa

Akatakata samsaaravanu

ಅಕಟಕಟ ಸಂಸಾರವನು

Composer: Sripadarajaru · Deity: Vishnu · Genre: Philosophy

Kannada lyrics

ಅಕಟಕಟ ಸಂಸಾರವನು ನೆಚ್ಚಿ ಕೆಡಬ್ಯಾಡ ||ಪ|| ವಿಕಟದಲಿ ಮಾನವರು ಕೆಟ್ಟರೆಲ್ಲರು ನಿಜ ||ಅ.ಪ|| ಮುನ್ನ ನರಕಾಸುರನು ಬಡಿದು ಚಿಂತಾಮಣಿಯ ತನ್ನ ಮನೆಯಲಿ ತಂದು ನಿಲ್ಲಿಸಿ ನೃಪರ ಕನ್ನೆಯರ ಷೋಡಶಸಹಸ್ರವನೆ ತಂದಾತ ಹೆಣ್ಣನೊಬ್ಬಳನೊಯ್ದುದಿಲ್ಲವೊ ನೋಡೊ ||೧|| ಸಾವಿರ ಕರ ಪಡೆದ ಕಾರ್ತವೀರ್ಯಾರ್ಜುನನು ಭೂವಲಯದೊಳಗೇ ವೀರನೆನಿಸಿ ರಾವಣನ ಸೆರೆಯಿಟ್ಟು ಕಾಮಧೇನುವ ಬಯಸಿ ಸಾವಾಗ ಏನು ಕೊಂಡೊಯ್ದನೋ ನೋಡೊ ||೨|| ಕೌರವನು ಧರೆಯೆಲ್ಲ ತನಗಾಗಬೇಕೆಂದು ವೀರಪಾಂಡವರೊಡನೆ ಕದನಮಾಡಿ ಮಾರಿಯ ವಶವೈದಿ ಹೋಹಾಗ ತನ್ನೊಡನೆ ಶ್ಯಾರೆ ಭೂಮಿಯ ಒಯ್ದುದಿಲ್ಲವೊ ನೋಡೊ ||೩|| ವರಯಜ್ಞಗಳ ಮಾಡಿ ನಹುಷ ಸುರಪತಿಯೆನಿಸಿ ಪರಮಮುನಿಗಳ ಕೈಲೆ ದಂಡಿಗೆಯ ಹೊರಿಸಿ ಉರ…

Transliteration

Akatakata samsaaravanu necci kedabyaada || pa || Vikatadali maanavaru kettavarellaru nija || a. Pa. || Munna narakaasuranu badidu chintaamaniya | tanna maneyali tandu nillisi nrupara | kanneyara shodasha sahasravane tandaata | henninobbalanoydudillavo nodo || 1 || Saavira kara padeda kaartaviryaarjunanu | bhovalayadolagobbane viranenisi | raavanana sereyittu kaamadhenuva bayasi | saayvaaga Enu kon…