Haridasa Sahitya — Vyasadasa

Akalige karugalu Esu ippavendu

ಆಕಳಿಗೆ ಕರುವುಗಳು ಏಸು ಇಪ್ಪಾವೆಂದು

Composer: Vijaya Dasaru · Deity: Hari · Genre: Ugabhoga

Kannada lyrics

ಆಕಳಿಗೆ ಕರುವುಗಳು ಏಸು ಇಪ್ಪಾವೆಂದು ಲೋಕದೊಳು ಕೇಳಿದರೆ ಜನ ಒಪ್ಪೋದು ಈ ಕರುವಿಗೆ ಎಷ್ಟು ಆಕಳುಗಳುಂಟೆಂದು ವಾಕು ಬೆಸಗೊಂಡರೆ ಜನಮೆಚ್ಚುವುದೆ? ಶ್ರೀಕಾಂತ ನಿನಗಿಂದು ಉತ್ತರ ಕೊಡಲಾಪೆನೆ ಸಾಕುವ ದೊರೆಗಳು ಎಷ್ಟೆಂದು ನೀ ಕೇಳಿದದಕೆ ಸೋಜಿಗವಾಗಿದೆ ಎನಗೆ ಸಾಕುವರು ನಿನ್ನ ವಿನಾ ಉಂಟೇನಯ್ಯಾ ಬಾಕುಳಿಗ ಮಾನವರು ಎನ್ನಂಥವರು ನಿನಗ ನೇಕ ಜನ ತುಂಬಿಹದು ನೋಡಿದಲ್ಲಿ ಏಕೋ ಸ್ವಾಮಿ ನೀನೆ ಎನಗೋರ್ವನಲ್ಲದೆ ನಾ ಕಾಣೆ ಇನ್ನೊಂದು ನಿನ್ನ ಸಮನಾ ಶ್ರೀ ಕಳತ್ರ ವಿಜಯವಿಠಲ ವೆಂಕಟರಾಯ ಯಾಕೆ ಎನ್ನೊಡನೆ ಈ ಮಾತು ಸೊಗಸೆ||

Transliteration

Akalige karugalu Esu ippavendu Lokadolu kelidare jana oppahudu I karuvige eshtu akalugaluntendu Vaku besagondare jana meccuvude Srikanta ninagimdu uttara kodalapene Sakuva doregalu eshtemdu Ni kelidudake sojigavagide enage Sakuvaru ninna vinaha untenayya Bakuligamanavaru ennanthavaru ninaga- Neka jana tumbihudu nodidalli Eko svami nine enagorvanallade Na kane innomdu ninna samana Sri kalatra vijay…