Haridasa Sahitya — Vyasadasa
Agjanigala kuda adhika
ಅಜ್ಞಾನಿಗಳ ಕೂಡ ಅಧಿಕ
Composer: Purandara Dasaru · Deity: Hari · Genre: Philosophy
Kannada lyrics
ಅಜ್ಞಾನಿಗಳ ಕೂಡ ಅಧಿಕ ಸ್ನೇಹಕ್ಕಿಂತ ಸುಜ್ಞಾನಿಗಳ ಕೂಡ ಜಗಳವೆ ಲೇಸು ಉಂಬುಡುವುದಕ್ಕಿರದ ಅರಸನೋಲುಗಕ್ಕಿಂತ ತುಂಬಿದೂರೊಳಗೆ ತಿರಿದುಂಬುವುದೆ ಲೇಸು ಹಂಬಲಿಸಿ ಹಾಳುಹರಟೆಗಳ ಹರಟೆಗಿಂತ ನಂಬಿ ಹರಿದಾಸರೊಳು ಪೊಂದುವುದೆ ಲೇಸು ಒಡನೆ ಹಂಗಿಸುವವನ ಪಾಲೋಗರಕ್ಕಿಂತ ಕುಡಿನೀರು ಕುಡಿದುಕೊಂಡಿರುವುದೆ ಲೇಸು ಕಡು ಕುಹಕನೊಡನೆ ಸಂಗವ ಮಾಡುವುದಕ್ಕಿಂತ ಅಡವಿಯೊಳಗಜ್ಞಾತವಾಸವೇ ಲೇಸು ಮಸೆದು ಮತ್ಸರಿಪ ಸತಿಯೊಡನೆ ಸಂಸಾರಕ್ಕಿಂತ ಹಸನಿಲ್ಲದಾ ಹಾಳುಗುಡಿಯೇ ಲೇಸು ಎಸೆದು ಭಜಿಸಲು ನಮ್ಮ ಪುರಂದರ ವಿಠಲನ್ನ ವಶವಹಗೆ ಮುಕ್ತಿಯು ವಶವಹುದೆ ಕೇಳಿ
Transliteration
Agnjanigala kuda adhika snehakkinta Suj~janigala kuda jagalave lesu Umbuduvudakkirada arasanolugakkinta Tumbidurolage tiridumbuvude lesu Hambalisi haluharategala harateginta Nambi haridasarolu pomduvude lesu Odane hangisuvavana palogarakkinta Kudiniru kudidukondiruvude lesu Kadu kuhakanodane sangava maduvudakkinta Adaviyolagaj~jatavasave lesu Masedu matsaripa satiyodane samsarakkinta Hasanillada h…