Haridasa Sahitya — Vyasadasa

Adavi acharyara adiya pondida janaru

ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು

Composer: Gokaavi Antadreesha Dasaru · Deity: Shri Madanoor Vishnuteertharu · Genre: Dasara Pada

Kannada lyrics

ಅಡವಿ ಆಚಾರ್ಯರ ಅಡಿಯ ಪೊಂದಿದ ಜನರು ಅಡಿಗಡಿಗೆ ಬಹುಪುಣ್ಯ ಪಡೆದು ಕೊಂಬುವರು ||pa|| ಪೊಡವಿಯಲಿ ಸಂಸಾರ ಮಡುವಿನಲಿ ಮುಣಿಮುಣಿಗಿ ಬಡವರಂತತಿ ಬಾಯ ಬಿಡುವರಲ್ಲವರು ||a.pa|| ಪಂಚರತ್ನವ ಪಠಿಸಿ ಪಂಚಮೂರ್ತಿಗಳನ್ನು ಮುಂಚೆ ತಿಳಿವರು ಈ ಪ್ರಪಂಚದಲ್ಲಿ ಹಂಚಿಕೆಯಲಿ ಮತ್ತೆ ಪಂಚಭೇದವ ತಿಳಿದು ಪಂಚ ಮಹಾ ಪಾಪಗಳ ಮುಂಚೆ ಕಳೆಯುವರು ||1|| ಭಂಗ ಬಿಡಿಸುವ ಸುಧೆಯ ಮಂಗಳಾರ್ಥವ ತಿಳಿದು ಅಂಗದಲಿ ಸುರಿವರು ಕಂಗಳೊದಕವ ಮಂಗಳಾಂಗನ ಅಂತರಂಗದಿ(ದಲಿ) ಸ್ಮರಿಸುತ್ತ ಮುಂಗೈಯ್ಯ ಮುದ್ರೆಗಳ ಧರಿಸುವರಿವರು||2|| ವಾಸುದೇವನ ದಾಸ ದಾಸರಾದೆವೆಂಬೊ ಆಶೆಯಲಿ ಅವನ ಸಹವಾಸ ಬಯಸುವರು ಶ್ರೀಸುಧಾರ್ಥಾನಂತಾದ್ರೀಶನಲ್ಲೇ ಭಕುತಿ ಯೇಸು ಕಾಲಕು ಬಿಡದೆ ಬ್ಯಾಸರ…

Transliteration

aDavi AcAryara aDiya pondida janaru aDigaDige bahupuNya paDedu koMbuvaru ||pa|| poDaviyali saMsAra maDuvinali muNimuNigi baDavarantati bAya biDuvarallavaru ||a.pa|| pancaratnava paThisi panchamUrtigaLannu munce tiLivaru I prapancadalli hancikeyali matte panchaBEdava tiLidu panca mahA pApagaLa munce kaLeyuvaru ||1|| Banga biDisuva sudheya mangaLArthava tiLidu angadali surivaru kangaLodakava mangaLA…