Haridasa Sahitya — Vyasadasa

Adadella olite ayitu

ಆದದ್ದೆಲ್ಲ ಒಳಿತೇ ಆಯಿತು

Composer: Purandara Dasaru · Deity: Hari · Genre: Philosophy

Kannada lyrics

ಆದದ್ದೆಲ್ಲ ಒಳಿತೇ ಆಯಿತು ನಮ್ಮ ಶ್ರೀಧರನ ಸೇವೆಗೆ ಸಾಧನ ಸಂಪತ್ತಾಯಿತು ||ಪ|| ದಂಡಿಗೆ ಬೆತ್ತ ಹಿಡಿಯುವುದಕ್ಕೆ ಮುಂಡೆ ಬಾಗಿ ನಾಚುತಲಿದ್ದೆ ಹೆಂಡತಿ ಸಂತತಿ ಸಾವಿರ ವಾಗಲಿ ದಂಡಿಗೆ ಬೆತ್ತ ಹಿಡಿಸಿದಳಯ್ಯ ||೧|| ಗೋಪಾಳ ಬುಟ್ಟಿ ಹಿಡಿಯುವುದಕ್ಕೆ ಭೂಪತಿ ಎಂದು ಗರ್ವಿಸುತ್ತಿದ್ದೆ ಆ ಪತ್ನೀಕುಲ ಸಾವಿರವಾಗಲಿ ಗೋಪಾಳ ಬುಟ್ಟಿ ಹಿಡಿಸಿದಳಯ್ಯ ||೨|| ತುಳಸೀ ಮಾಲೆ ಹಾಕುವುದಕ್ಕೆ ಅರಸನೆಂದು ತಿರುಗುತಲಿದ್ದೆ ಸರಸಿಜಾಕ್ಷ ಶ್ರೀ ಪುರಂದರ ವಿಠಲನು ತುಳಸಿಮಾಲೆ ಹಾಕಿದನಯ್ಯ ||೩||

Transliteration

Adaddella olite Ayitu namma Sridharana sevege sadhana sampattayitu ||pa|| Dandige betta hidiyuvudakke Munde bagi nacutalidde Hendati santati savira vagali Dandige betta hidisidalayya ||1|| Gopala butti hidiyuvudakke Bupati emdu garvisuttidde A patnikula saviravagali Gopala butti hidisidalayya ||2|| Tulasi male hakuvudakke Arasanendu tirugutalidde Sarasijaksha sri purandara vithalanu Tulasimale hak…