Haridasa Sahitya — Vyasadasa

Acharavillada nalige ninna

ಆಚಾರವಿಲ್ಲದ ನಾಲಿಗೆ ನಿನ್ನ

Composer: Purandara Dasaru · Deity: Hari · Genre: Philosophy

Kannada lyrics

ಆಚಾರವಿಲ್ಲದ ನಾಲಿಗೆ ನಿನ್ನ ನೀಚ ಬುದ್ಧಿಯ ಬಿಡು ನಾಲಿಗೆ||pa|| ವಿಚಾರವಿಲ್ಲದೆ ಪರರ ದೂಷಿಸುವುದಕ್ಕೆ ಚಾಚಿಕೊಂಡಿರುವಂತ ನಾಲಿಗೆ||a.pa|| ಪ್ರಾತಃಕಾಲದೊಳೆದ್ದು ನಾಲಿಗೆ ಸಿರಿ- ಪತಿಯೆನ್ನಬಾರದೆ ನಾಲಿಗೆ ಪತಿತ ಪಾವನ ನಮ್ಮ ರತಿಪತಿ ಜನಕನ ಸತತವು ನುಡಿ ಕಂಡ್ಯ ನಾಲಿಗೆ||1|| ಚಾಡಿ ಹೇಳಲಿಬೇಡ ನಾಲಿಗೆ ನಿನ್ನ ಬೇಡಿಕೊಂಬುವೆನು ನಾಲಿಗೆ ರೂಢಿಗೊಡಯ ಶ್ರೀರಾಮನ ನಾಮವ ಪಾಡುತಲಿರು ಕಂಡ್ಯ ನಾಲಿಗೆ||2|| ಹರಿಯ ಸ್ಮರಣೆ ಮಾಡು ನಾಲಿಗೆ ನರ- ಹರಿಯ ಭಜಿಸು ಕಂಡ್ಯ ನಾಲಿಗೆ ವರದ ಪುರಂದರವಿಟ್ಠಲರಾಯನ ಚರಣಕಮಲವ ನೆನೆ ನಾಲಿಗೆ||3||

Transliteration

Acaravillada nalige ninna Nica buddhiya bidu nalige||pa|| Vicaravillade parara dushisuvudakke Cacikondiruvanta nalige||a.pa|| Pratahkaladoleddu nalige siri- Patiyennabarade nalige Patita pavana namma ratipati janakana Satatavu nudi kandya nalige||1|| Cadi helalibeda nalige ninna Bedikombuvenu nalige Rudhigodaya sriramana namava Padutaliru kandya nalige||2|| Hariya smarane madu nalige nara- Hariya…