Haridasa Sahitya — Vyasadasa

Aava kadeyinda bande

ಆವಕಡೆಯಿಂದ ಬಂದೆ

Composer: Vadirajaru · Deity: Vishnu · Genre: Dasara Pada

Kannada lyrics

ಆವಕಡೆಯಿಂದ ಬಂದೆ ವಾಜಿವದನನೆಭಾವಿಸುವ ವಾದಿರಾಜಮುನಿಯ ಕಾಣುತ ||PA|| ನೇವರಿಸಿ ಮೈಯ ತಡವಿ ನೇಹದಿಂದಲಿ ಮೇಲುನೈವೇದ್ಯವನ್ನು ಇತ್ತು ಭಜಿಸುವೆ||a.pa|| ಭಕುತಿಕಡಲೆ ಜ್ಞಾನ ವೈರಾಗ್ಯಬೆಲ್ಲದಮುಕುತಿ ಆನಂದಸುಖದ ಕ್ಷೀರಲಡ್ಡಿಗೆ ಯುಕುತಿ ಧ್ಯಾನಕೊಟ್ಟು ನೀನು ಎಲ್ಲಮಾತಲಿಶಕುತಿ ಸಂತೋಷ ಮಹಿಮೆ ತೋರಬಂದೆಯ ||1|| ಹೆತ್ತತುಪ್ಪ ಸಕ್ಕರೆಯ ಮಡ್ಡಿಮುದ್ದೆಯತುತ್ತುಮಾಡಿ ಕೊಡಲು ಅದನು ಮೆಲುತ ಮೆಚ್ಚುತಅತ್ಯಂತ ಸಂತೋಷ ನೀನು ಆಟತೋರುತಭೃತ್ಯ ವಾದಿರಾಜಮುನಿಯ ಸಲಹಬಂದೆಯ ||2|| ಫಲವ ಕೊಟ್ಟು ರಕ್ಷಿಸಿದಿ ವಾಜಿವದನನೆನಿಲುವೋ ಜ್ಞಾನ ಭಕ್ತಿಯನ್ನು ನೀಡಬಂದೆಯ ಸುಲಭ ಸುಮುಖ ಸುಪ್ರಸನ್ನ ಹಯವದನನೆಚೆಲುವ ಚಿನ್ಮಯಮೂರ್ತಿ ನಮ್ಮ ಸಲಹ ಬಂದೆಯ||3…

Transliteration

Aava kadeyinda bande vaajivadanane | bhaavisuta vaadiraaja muniya kaanuta || pa || Nevarisi maiya tadavi nehadindali | melu naivedyavannu ittu bhajisuve || a. Pa. || Bhakuti kadale j~jaana vairaagya bellada | mukuti aananda sukhada ksheera laddige | yukuti dhyaana kottu neenu ella maatali | shakuti santosha mahime tora bandeya || 1 || Hetta tuppa sakkareya maadi muddeya | tuttu maadi kodalu adanu…