Haridasa Sahitya — Vyasadasa
Aarige vadhuvaade ambujaakshi
ಆರಿಗೆ ವಧುವಾದೆ ಅಂಬುಜಾಕ್ಷಿ
Composer: Purandara Dasaru · Deity: Lakshmi Devi · Genre: Bhakti
Kannada lyrics
ಆರಿಗೆ ವಧುವಾದೆ ಅಂಬುಜಾಕ್ಷಿ ಕ್ಷೀರಾಬ್ಧಿಕನ್ನಿಕೆ ಶ್ರೀಮಹಾಲಕುಮಿ ||ಪ|| ಶರಧಿಬಂಧನ ರಾಮಚಂದ್ರಮೂರುತಿಗೋ ಪರಮಾತ್ಮ ಶ್ರೀ ಅನಂತಪದ್ಮನಾಭನಿಗೋ ಸರಸಿಜನಾಭ ಜನಾರ್ಧನಮೂರುತಿಗೋ ಎರಡು ಹೊಳೆಯ ರಂಗಪಟ್ಟಣವಾಸಗೋ || ಚೆಲುವ ಬೇಲೂರ ಚೆನ್ನಿಗರಾಯನಿಗೋ ಕೆಳದಿ ಹೇಳುಡುಪಿನ ಕೃಷ್ಣರಾಯನಿಗೋ ಇಳೆಯೊಳು ಪಂಢರೀಪುರನಿಲಯ ವಿಠಲೇಶಗೋ ನಳಿನಾಕ್ಷಿ ಹೇಳು ಬದರೀನಾರಾಯಣನಿಗೋ || ಮಲಯಜಗಂಧಿ ಬಿಂದುಮಾಧವರಾಯಗೋ ಸುಲಭದೇವರ ಪುರುಷೋತ್ತಮನಿಗೋ ಫಲದಾಯಕ ನಿತ್ಯಮಂಗಳನಾಯಕಗೋ ಚೆಲುವೆ ನಾಚದೆ ಪೇಳು ಶ್ರೀವೆಂಕಟೇಶಗೋ || ವಾಸವಾರ್ಚಿತ ಕಾಂಚಿ ವರದರಾಜಮೂರುತಿಗೋ ಅಸುರಾರಿ ಶ್ರೀಮುಷ್ಣದಾದಿವರಹನಿಗೋ ಶೇಷಶಾಯಿಯಾದ ಶ್ರೀರಂಗನಾಯಕಗೋ ಸಾಸಿರನಾಮದೊಡೆಯ ಅಳಗಿರ…
Transliteration
Aarige vadhuvaade ambujaakshi nee || pa || Ksheeraabdhi kannike shree mahaalakumi nee || a. Pa || Sharadhi bandhana raamachandra moorutigo | Paramaatma shree ananta padmanaabhanigo || Sarasijanaabha janaardhana moorutigo | Eradu holeya ranga pattanavaasago || 1 || Cheluva beloora chennigaraayanigo | Keladi heludupiya krushnaraayanigo || Ileyolu pandharapura nilaya viththalago | Nalinaakshi helu ba…