Haridasa Sahitya — Vyasadasa

Aarathi yetthire kesava naarayanage

ಆರತಿಯೆತ್ತಿದರೆ ಕೇಶವ ನಾರಾಯಣಗೆ

Composer: Vadirajaru · Deity: Vishnu · Genre: Aarathi

Kannada lyrics

ಆರತಿಯೆತ್ತಿದರೆ ಕೇಶವ ನಾರಾಯಣಗೆ ||ಪ|| ಶಾಶ್ವತವೀವ ಮಾಧವ ವಾಸವವಂದ್ಯ ಗೋವಿಂದಗಾರತಿಯನೆತ್ತಿದರೆ ||ಅ.ಪ|| ದ್ವಾಪರ ರಹಿತ ಶ್ರೀವಿಷ್ಣುವಿಗೆ ಅಪಾರ ಮಧುಸೂದನಗೆ ಪಾಪರಹಿತ ತ್ರಿವಿಕ್ರಮಗಾರತಿಯನೆತ್ತಿದರೆ|| ಸಾಧುಸೇವಿತ ವಾಮನಗೆ ಶ್ರೀಧರ ಹೃಷೀಕೇಶನಿಗೆ ಆದಿಮೂರುತಿ ಪದ್ಮನಾಭಗಾರತಿಯನೆತ್ತಿದರೆ || ದÁಮೋದರ ವಾಲುಳ್ಳವಗೆ(?) ಪ್ರೇಮದಿ ಸಂಕರ್ಷಣಗೆ ಕಾಮಿತಾರ್ಥವನೀವ ವಾಸುದೇವಗಾರತಿಯನೆತ್ತಿದರೆ || ಅನಿರುದ್ಧ ಪುರುಷೋತ್ತಮಗೆ ವಿನಯದಿಂದಲಿ ಅಧೋಕ್ಷಜಗಾರತಿಯನೆತ್ತಿದರೆ || ನರಸಿಂಹರೂಪನಾದವಗೆ ವರದ ಮೂರುತಿ ಅಚ್ಯುತಗೆ ಅರಿಭಯಂಕರ ಜನಾರ್ದನಗಾರತಿಯನೆತ್ತಿದರೆ || ಉಪೇಂದ್ರನೆಂದೆನಿಸಿಕೊಂಡವಗೆ ಅಪಾರಮಹಿಮ ಶ್ರೀಹರಿಗೆ ಗೋಪಾಲಮೂರು…

Transliteration

Aratiyettidare kesava narayanage ||pa|| Sasvataviva madhava Vasavavandya govindagaratiyanettidare ||a.pa|| Dvapara rahita srivishnuvige apara madhusudanage Paparahita trivikramagaratiyanettidare|| Sadhusevita vamanage sridhara hrushikesanige Adimuruti padmanabagaratiyanettidare || Daámodara valullavage(?) Premadi sankarshanage Kamitarthavaniva vasudevagaratiyanettidare || Aniruddha purushottamage…