Haridasa Sahitya — Vyasadasa

Aarambadhali namipe

ಆರಂಭದಲಿ ನಮಿಪೆ

Composer: Shyamasundara Dasaru · Deity: Ganesha · Genre: Bhakti

Kannada lyrics

ಆರಂಭದಲಿ ನಮಿಪೆ ಬಾಗಿ ಶಿರವ ಹೇರಂಬ ನೀನೊಲಿದು ನೀಡೆನಗೆ – ವರವ ||pa|| ದ್ವಿರದ ವದನನೆ ನಿರುತ | ದ್ವಿರದ ವರದನ ಮಹಿಮೆ ಹರುಷದಲಿ ಕರಜಿಹ್ವೆ ಎರಡರಿಂದ ಬರೆದು ಪಾಡುವದಕ್ಕೆ | ಬರುವ ವಿಷ್ನುನವ ತರಿದ ಕರುಣದಿಂದಲಿ ಎನ್ನ ಕರಪಿಡಿದು ಸಲಹೆಂದು ||1|| ಕುಂಭಿಣಿಜೆ ಪತಿ ರಾಮ | ಜಂಭಾರಿ ಧರ್ಮಜರು ಅಂಬರಾಧಿಪ ರಕುತಾಂಬರನೆ ನಿನ್ನ || ಸಂಭ್ರಮದಿ ಪೂಜಿಸಿದರೆಂಬವಾರುತಿ ಕೇಳಿ ಹಂಬಲವ ಸಲಿಸೆಂದು | ನಂಬಿ ನಿನ್ನಡಿಗಳಿಗೆ||2|| ಸೋಮಶಾಪದ ವಿಜಿತ | ಕಾಮ ಕಾಮಿತ ದಾತ ವಾಮ ದೇವನ ತನಯ ನೇಮದಿಂದ ಶ್ರೀಮನೋಹರನಾಥ ಶಾಮಸುಂದರ ಸ್ವಾಮಿ ನಾಮ ನೆನೆಯುವ ಭಾಗ್ಯ ಪ್ರೇಮದಲಿ ಕೊಡು ಎಂದು ||3||

Transliteration

Aarambhadali namipe baagi shiravaa | ( herambha neenolidu) needenage varavaa || pa || Dwirada vadanane niruta | dwirada vadanana mahime Harushadali karajihwe eradarimdaa Baredu paaduvudakke baruva vignava taridu | Karunadimdali enna kara pididu salahemdu || 1 || Kumbhinije patiraama | jambhaari dharmajaru Ambaraadhipa raktaambharane ninna Sambhramadi poojisidaremba vaaruti keli Hambalava salisemdu…