Haridasa Sahitya — Vyasadasa

Aada pogona baaro

ಆಡಲು ಪೋಗೊಣು ಬಾರೊ

Composer: Sripadarajaru · Deity: Krishna · Genre: Dasara Pada

Kannada lyrics

ಆಡಲು ಪೋಗೊಣು ಬಾರೊ ರಂಗ ಕೂಡಿ ಯಮುನಾ ತೀರದಲ್ಲಿ ||ಪ|| ಚಿಣ್ಣಿಕೋಲು ಚೆಂಡು ಬುಗರಿ ಸಣ್ಣ ಸಣ್ಣ ಆಟಗಳನು ಕಣ್ಣಮುಚ್ಚಲಿಕೆ ಕುಂಟಲಿಪಿ ಬಣ್ಣ ಬಣ್ಣದ ಆಟಗಳನು ||೧|| ಜಾಹ್ನವಿಯ ತೀರವಂತೆ ಜನಕರಾಜನ ಕುವರಿಯಂತೆ ಜಾನಕಿಯ ವಿವಾಹವಂತೆ ಜಾಣ ನೀನು ಬರಬೇಕಂತೆ ||೨|| ಪುಂಡರೀಯ ನಗರವಂತೆ ಭೀಷ್ಮಕರಾಜನ ಕುವರಿಯಂತೆ ಶಿಶುಪಾಲನ್ನ ಒಲ್ಲಳಂತೆ ನಿಮಗೆ ಓಲೆ ಬರೆದಳಂತೆ||೩|| ಕೌರವರು ಪಾಂಡವರು ಲೆತ್ತವಾಡಿ ಸೋತರಂತೆ ರಾಜ್ಯವನ್ನು ಬಿಟ್ಟರಂತೆ ರಂಗವಿಠಲ ಬರಬೇಕಂತೆ ||೪||

Transliteration

Aada pogona baaro rangaa | koodi yamuna teeradalli || pa || Jaahnaviya teeravante | janakaraajana kuvariyante | jaanakige vivaahavante | jaana neenu barabekante || 1 || Koundineeya nagaravante | bheeshmaka raajana kuvariyante | shishupaalana ollalante | ninage Ole baredalante || 2 || Kouravarol paandavaru | lettavaadi sotarante | raajyavannu bidabekante | rangaviththala barabekante || 3 ||