Haridasa Sahitya — Vyasadasa
Harikathamritasara 8 - Mathruka sandhi
ಹರಿಕಥಾಮೃತಸಾರ 8 - ಮಾತೃಕಾ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಪಾದಮಾನಿ ಜಯಂತನ ಒಳಗೆ ಸುಮೇಧ ನಾಯಕನು ಇಪ್ಪ ದಕ್ಷಿಣ ಪಾದದ ಅಂಗುಟದಲ್ಲಿ ಪವನನು ಭಾರಭೃದ್ರೂಪ ಕಾದುಕೊಂಡಿಹ ಟಂಕಿತರ ಮೊದಲಾದ ನಾಮದಿ ಸಂಧಿಗಳಲಿ ಈರೈದು ರೂಪದಲಿ ಇಪ್ಪ ಸಂತತ ನಡೆದು ನಡೆಸುತಲಿ||1|| ಕಪಿಲ ಚಾರ್ವಾಂಗ ಆದಿ ರೂಪದಿ ವಪುಗಳೊಳು ಹಸ್ತಗಳ ಸಂಧಿಯೊಳು ಅಪರಿಮಿತ ಕರ್ಮಗಳ ಮಾಡುತಲಿಪ್ಪ ದಿನದಿನದಿ ಕೃಪಣ ವತ್ಸಲ ಪಾರ್ಶ್ವದೊಳು ಪರ ಸುಫಲಿಯೆನಿಸುವ ಗುದುಪಸ್ಥದಿ ವಿಪುಳ ಬಲಿಭಗ ಮನವೆನಿಸಿ ತುಂದಿಯೊಳಗೆ ಇರುತಿಹನು||2|| ಐದು ಮೇಲೊಂದಧಿಕದಳವುಳ್ಳ ಐದು ಪದ್ಮವು ನಾಭಿ ಮೂಲದಿ ಐದು ಮೂರ್ತಿಗಳಿಹವು ಅನಿರುದ್ಧಾದಿ ನಾಮದಲಿ ಐದಿ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| pAdamAni jayantana oLage sumEdha nAyakanu ippa dakShiNa pAdada anguTadalli pavananu BAraBRudrUpa kAdukonDiha Tankitara modalAda nAmadi sandhigaLali Iraidu rUpadali ippa santata naDedu naDesutali||1|| kapila cArvAnga Adi rUpadi vapugaLoLu hastagaLa sandhiyoLu aparimita karmagaLa mADutalippa dinadinadi…