Haridasa Sahitya — Vyasadasa

Harikathamritasara 7 - Panchatanmathra sandhi

ಹರಿಕಥಾಮೃತಸಾರ 7 - ಪಂಚತನ್ಮಾತ್ರ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಭೂಸಲಿಲ ಶಿಖಿ ಪವನ ಭೂತ ಆಕಾಶದೊಳಗೆ ಐದೈದು ತನ್ಮಾತ್ರಾ ಸಹಿತ ಒಂದಧಿಕ ಪಂಚಾಶತ್ ವರಣ ವೇದ್ಯ ಈ ಶರೀರದಿ ವ್ಯಾಪಿಸಿದ್ದು ಸುರಾಸುರರಿಗೆ ನಿರಂತರದಲಿ ಸುಖಾಸುಖಪ್ರದನಾಗಿ ಆಡುವ ದ್ವೇಷಿಪರ ಬಡಿವ||1|| ಪ್ರಣವ ಪ್ರತಿಪಾದ್ಯ ತ್ರಿನಾಮದಿ ತನುವಿನೊಳು ತ್ರಿಸ್ಥಾನಗ ಅನಿರುದ್ಧನು ತ್ರಿಪಂಚಕ ಏಕ ವಿಂಶತಿ ಚತುರ ವಿಂಶತಿಗನು ಎನಿಸಿ ಎಪ್ಪತ್ತೆರಡು ಸಾವಿರ ಇನಿತು ನಾಡಿಗಳೊಳು ನಿಯಾಮಿಸುತ ಇನ ಭಸ್ತಿಗ ಲೋಕದೊಳು ಸರ್ವತ್ರ ಬೆಳಗುವನು||2|| ಜೀವಲಿಂಗಾನಿರುದ್ಧ ಸ್ಥೂಲ ಕಳೇವರಗಳಲಿ ವಿಶ್ವತುರಗಗ್ರೀವ ಮೂಲೇಶ ಅಚ್ಯುತತ್ರಯ ಹಂಸ ಮೂರ್ತಿಗಳ ಈ…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| BUsalila SiKi pavana BUta AkASadoLage aidaidu tanmAtrA sahita oMdadhika pancASat varaNa vEdya I SarIradi vyApisiddu surAsurarige nirantaradali suKAsuKapradanAgi ADuva dvEShipara baDiva||1|| praNava pratipAdya trinAmadi tanuvinoLu tristhAnaga aniruddhanu tripancaka Eka viMSati catura viMSatiganu enisi…