Haridasa Sahitya — Vyasadasa

Harikathamritasara 6 - Panchamahayagna Sandhi

ಹರಿಕಥಾಮೃತಸಾರ 6 - ಪಂಚಮಹಾಯಜ್ನ್ಯ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಜನನಿಪಿತಭೂವಾರಿದಾಂಬರವೆನಿಪ ಪಂಚಾಗ್ನಿಯಲಿ ನಾರಾಯಣನ ತ್ರಿಂಶತಿ ಮೂರ್ತಿಗಳ ವ್ಯಾಪಾರ ವ್ಯಾಪ್ತಿಗಳ ನೆನೆದು ದಿವಸಾಳು ಎಂಬ ಸಮಿಧೆಗಳು ನಿರಂತರ ಹೋಮಿಸುತ ಪಾವನಕೆ ಪಾವನನು ಎನಿಪ ಪರಮನ ಬೇಡು ಪರಮಸುಖ||1|| ಗಗನ ಪಾವಕ ಸಮಿಧೆ ರವಿ ರಶ್ಮಿಗಳೇ ಧೂಮವು ಅರ್ಚಿಯೆನಿಪುದು ಹಗಲು ನಕ್ಷತ್ರಗಳು ಕಿಡಿಗಳು ಚಂದ್ರಮ ಅಂಗಾರ ಮೃಗವರ ಉದರನೊಳಗೆ ಐದು ರೂಪಗಳ ಚಿಂತಿಸಿ ಭಕ್ತಿರಸ ಮಾತುಗಳೆ ಮಂತ್ರವ ಮಾಡಿ ಹೋಮಿಸುವರು ವಿಪಶ್ಚಿತರು||2|| ಪಾವಕನು ಪರ್ಜನ್ಯ ಸಮಿಧೆಯು ಪ್ರಾವಹೀಪತಿ ಧೂಮಗಳು ಮೇಘಾವಳಿಗಳು ಅರ್ಚಿ ಕ್ಷಣಪ್ರಭೆ ಗರ್ಜನವೆ ಕಿಡಿಯು ಭಾ…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| jananipitaBUvAridAMbaravenipa pancAgniyali nArAyaNana trimSati mUrtigaLa vyApAra vyAptigaLa nenedu divasALu eMba samidhegaLu nirantara hOmisuta pAvanake pAvananu enipa paramana bEDu paramasuKa||1|| gagana pAvaka samidhe ravi raSmigaLE dhUmavu arciyenipudu hagalu nakShatragaLu kiDigaLu candrama angAra…