Haridasa Sahitya — Vyasadasa

Harikathamritasara 5 - Vibhoothi sandhi

ಹರಿಕಥಾಮೃತಸಾರ 5 - ವಿಭೂತಿ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀ ತರುಣಿ ವಲ್ಲಭನ ಪರಮ ವಿಭೂತಿ ರೂಪ ಕಂಡ ಕಂಡಲ್ಲಿ ಈ ತೆರದಿ ಚಿಂತಿಸುತ ನೋಡು ಸಂಭ್ರಮದಿ ನೀತ ಸಾಧಾರಣ ವಿಶೇಷ ಸಜಾತಿ ನೈಜ ಅಹಿತವು ವಿಜಾತಿ ಖಂಡಾಖಂಡ ಬಗೆಗಳನು ಅರಿತು ಬುಧರಿಂದ||1|| ಜಲಧರಾಗಸದೊಳಗೆ ಚರಿಸುವ ಹಲವು ಜೀವರ ನಿರ್ಮಿಸಿಹನು ಅದರೊಳು ಸಜಾತಿ ವಿಜಾತಿ ಸಧಾರಣ ವಿಶೇಷಗಳ ತಿಳಿದು ತತ್ತತ್ ಸ್ಥಾನದಲಿ ವೆಗ್ಗಳಿಸಿ ಹಬ್ಬಿದ ಮನದಿ ಪೂಜಿಸುತಲಿ ಅವನ ವ್ಯಾಪ್ತ ರೂಪಗಳ ನೋಡುತಲಿ ಹಿಗ್ಗುವುದು||2|| ಪ್ರತಿಮೆ ಶಾಲಗ್ರಾಮ ಗೋ ಅಭ್ಯಾಗತನು ಅತಿಥಿ ಶ್ರೀತುಳಸಿ ಪಿಪ್ಪಲ ಯತಿವನಸ್ಥ ಗೃಹಸ್ಥ ವಟು ಯಜಮಾನ ಸ್ವಪರ ಜನ ಪೃಥಿವಿ ಜಲ…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| SrI taruNi vallaBana parama viBUti rUpa kanDa kanDalli I teradi cintisuta nODu saMBramadi nIta sAdhAraNa viSESha sajAti naija ahitavu vijAti KanDAKanDa bagegaLanu aritu budharinda||1|| jaladharAgasadoLage carisuva halavu jIvara nirmisihanu adaroLu sajAti vijAti sadhAraNa viSEShagaLa tiLidu tattat sthA…