Haridasa Sahitya — Vyasadasa
Harikathamritasara 29 - 29. Anu taratamya sandhi
ಹರಿಕಥಾಮೃತಸಾರ 29 - ಅಣುತಾರತಮ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ವಿಷ್ಣು ಸರ್ವೋತ್ತಮನು ಪ್ರಕೃತಿ ಕನಿಷ್ಠಳು ಎನಿಪಳು ಅನಂತ ಗುಣ ಪರಮೇಷ್ಠಿ ಪವನರು ಕಡಿಮೆ ವಾಣೀ ಭಾರತಿಗಳು ಅಧಮ ವಿಷ್ಣು ವಹನ ಫಣೀಂದ್ರ ಮೃಡರಿಗೆ ಕೃಷ್ಣ ಮಹಿಷಿಯರು ಅಧಮರು ಇವರೊಳು ಶ್ರೇಷ್ಠಳು ಎನಿಪಳು ಜಾಂಬವತಿ ಆವೇಶ ಬಲದಿಂದ||1|| ಪ್ಲವಗ ಪನ್ನಗಪ ಅಹಿ ಭೂಷಣ ಯುವತಿಯರು ಸಮ ತಮ್ಮೊಳಗೆ ಜಾಂಬವತಿಗಿಂದಲಿ ಕಡಿಮೆ ಇವರು ಇಂದ್ರ ಕಾಮರಿಗೆ ಅವರ ಪ್ರಾಣನು ಕಡಿಮೆ ಕಾಮನ ಕುವರ ಶಚಿ ರತಿ ದಕ್ಷ ಗುರು ಮನು ಪ್ರವಹ ಮಾರುತ ಕೊರತೆಯೆನಿಸುವ ಆರು ಜನರಿಂದ||2|| ಯಮ ದಿವಾಕರ ಚಂದ್ರ ಮಾನವಿ ಸುಮರು ಕೋಣಪ ಪ್ರವಹಗೆ ಅಧಮರು ದ್ಯುಮಣಿಗಿಂದಲಿ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| viShNu sarvOttamanu prakRuti kaniShThaLu enipaLu ananta guNa paramEShThi pavanaru kaDime vANI BAratigaLu adhama viShNu vahana PaNIndra mRuDarige kRuShNa mahiShiyaru adhamaru ivaroLu SrEShThaLu enipaLu jAMbavati AvESa baladiMda||1|| plavaga pannagapa ahi BUShaNa yuvatiyaru sama tammoLage jAMbavatiginda…