Haridasa Sahitya — Vyasadasa
Harikathamritasara 28 - 28. Vigneshwara sthothra sandhi
ಹರಿಕಥಾಮೃತಸಾರ 28 - ವಿಘ್ನೇಶ್ವರ (ಗಣಪತಿ) ಸ್ತೋತ್ರ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಪೇಳುವೆ ಪರಮ ಭಗವದ್ ಭಕ್ತರಿದನಾದರದಿ ಕೇಳುವುದು || ಶ್ರೀಶನಂಘ್ರಿಸರೋಜಭೃಂಗ ಮಹೇಶಸಂಭವ ಮನ್ಮನದೊಳು ಪ್ರಕಾಶಿಸನುದಿನ ಪ್ರಾರ್ಥಿಸುವೆ ಪ್ರೇಮಾತಿಶಯದಿಂದ ನೀ ಸಲಹು ಸಜ್ಜನರ ವೇದ ವ್ಯಾಸ ಕರುಣಾಪಾತ್ರ ಮಹದಾಕಾಶಪತಿ ಕರುಣಾಳು ಕೈಪಿಡಿದೆಮ್ಮನುದ್ಧರಿಸು ||೧|| ಏಕದಂತ ಇಭೇಂದ್ರಮುಖ ಚಾಮೀಕರಕೃತಭೂಷಣಾಂಗ ಕೃಪಾಕಟಾಕ್ಷದಿ ನೋಡು ವಿಜ್ಞಾಪಿಸುವೆನಿನಿತೆಂದು ನೋಕನೀಯನ ತುತಿಸುತಿಪ್ಪ ವಿವೇಕಿಗಳ ಸಹವಾಸ ಸುಖಗಳ ನೀ ಕರುಣಿಸುವುದೆಮಗೆ ಸಂತತ ಪರಮಕರುಣಾಳು ||೨|| ವಿಘ್ನರಾಜನೆ ದುರ್ವಿಷಯದೊಳು ಮಗ್ನವಾಗಿಹ ಮನವ ಮಹದೋ ಷಘ್ನ ನಂಘ್ರಿಸರೋಜಯುಗಳದಿ ಭಕ್ತಿಪೂರ್ವಕದಿ ಲಗ್ನವಾಗಲಿ ನಿತ್ಯಾನರಕಭಯಾಗ್ನ…
Transliteration
Harikathamrutasara gurugala Karunadindapanitu peluve Parama bhagavadbhaktaridanadaradi keluvudu Shrishanamghri sarojabhrunga ma Heshasambhava manmanadolu pra Kashisanudina prarthisuve prematishayadinda Ni salahu sajjanara veda Vyasa karunapatra mahada Kashapati karunalu kaipididemmanuddharisu||1|| Ekadanta ibhendramukha cha Mikarakruta bhushananga kru Pa kathashaadi nodu vignanapisuveninitendu Nok…