Haridasa Sahitya — Vyasadasa

Harikathamritasara 27 - 27. Anukramanika tharatamya sandhi

ಹರಿಕಥಾಮೃತಸಾರ 27 - ಅನುಕ್ರಮಣಿಕಾ ತಾರತಮ್ಯ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಮನುಜೋತ್ತಮವಿಡಿದು ಸಂಕರುಷಣನ ಪರ್ಯಂತರದಿ ಪೇಳಿದ ಅನುಕ್ರಮಣಿಕೆಯ ಪದ್ಯವನು ಕೇಳುವುದು ಸಜ್ಜನರು|| ಶ್ರೀಮದಾಚಾರ್ಯರ ಮತಾನುಗ ಧೀಮತಾಂ ವರರಂಘ್ರಿ ಕಮಲಕೆ ಸೋಮಪಾನಾರ್ಹರಿಗೆ ತಾತ್ವಿಕ ದೇವತಾ ಗಣಕೆ ಹೈಮವತಿ ಷಣ್ಮಹಿಷಿಯರ ಪದ ವ್ಯೋಮಕೇಶಗೆ ವಾಣಿ ವಾಯೂ ತಾಮರಸ ಭವ ಲಕ್ಷ್ಮಿ ನಾರಾಯಣರಿಗೆ ನಮಿಪೆ||1|| ಶ್ರೀಮತಾಂವರ ಶ್ರೀಪತೆ ಸತ್ಕಾಮಿತ ಪ್ರದ ಸೌಮ್ಯ ತ್ರಿಕಕುದ್ಧಾಮ ತ್ರಿ ಚತುಪಾದ ಪಾವನ ಚರಿತ ಚಾರ್ವಾಂಗ ಗೋಮತಿಪ್ರಿಯ ಗೌಣ ಗುರುತಮ ಸಾಮಗಾಯನಲೋಲ ಸರ್ವ ಸ್ವಾಮಿ ಮಮಕುಲದೈವ ಸಂತೈಸುವುದು ಸಜ್ಜನರ||2|| ರಾಮ ರಾಕ್ಷಸ ಕುಲ ಭಯಂಕರ ಸಾ…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| manujOttamaviDidu saMkaruShaNana paryantaradi pELida anukramaNikeya padyavanu kELuvudu sajjanaru|| SrImadAcAryara matAnuga dhImatAM vararanGri kamalake sOmapAnArharige tAtvika dEvatA gaNake haimavati ShaNmahiShiyara pada vyOmakESage vANi vAyU tAmarasa Bava lakShmi nArAyaNarige namipe||1|| SrImatAMvara…