Haridasa Sahitya — Vyasadasa

Harikathamritasara 26 - 26. Avarohana taratamya sandhi

ಹರಿಕಥಾಮೃತಸಾರ 26 - ಅವರೋಹಣ ತಾರತಮ್ಯ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀರಮಣ ನಿಜಭಕ್ತರೆನಿಸುವ ವಾರಿಜಾಸನ ಮುಖ್ಯ ನಿರ್ಜರ ತಾರತಮ್ಯವ ಪೇಳ್ವೆ ಸಂಕ್ಷೇಪದಲಿ ಗುರುಬಲದಿ|| ಕೇಶವಗೆ ನಾರಾಯಣಗೆ ಕಮಲಾಸನ ಸಮೀರರಿಗೆ ವಾಣಿಗೆ ವೀಶ ಫಣಿಪ ಮಹೇಶರಿಗೆ ಷಣ್ಮಹಿಷಿಯರ ಪದಕೆ ಶೇಷ ರುದ್ರರ ಪತ್ನಿಯರಿಗೆ ಸುವಾಸದ ಪ್ರದ್ಯುಮ್ನರಿಗೆ ಸಂತೋಷದಲಿ ವಂದಿಸುವೆ ಭಕ್ತಿ ಜ್ಞಾನ ಕೊಡಲೆಂದು||1|| ಪ್ರಾಣದೇವಗೆ ನಮಿಪೆ ಕಾಮನ ಸೂನು ಮನು ಗುರು ದಕ್ಷ ಶಚಿ ರತಿ ಮಾನಿನಿಯರಿಗೆ ಪ್ರವಹ ದೇವಗೆ ಸೂರ್ಯ ಸೋಮ ಯಮ ಮಾನವಿಗೆ ವರುಣನಿಗೆ ವೀಣಾ ಪಾಣಿ ನಾರದ ಮುನಿಗೆ ನಪಿಸುವೆ ಜ್ಞಾನ ಭಕ್ತಿ ವಿರಕ್ತಿ ಮಾರ್ಗವ ತಿಳಿಸಲಿ ಎನಗೆಂದು||2…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| SrIramaNa nijaBaktarenisuva vArijAsana muKya nirjara tAratamyava pELve saMkShEpadali gurubaladi|| kESavage nArAyaNage kamalAsana samIrarige vANige vISa PaNipa mahESarige ShaNmahiShiyara padake SESha rudrara patniyarige suvAsada pradyumnarige saMtOShadali vaMdisuve Bakti j~jAna koDalendu||1|| prANadEva…