Haridasa Sahitya — Vyasadasa
Harikathamritasara 25 - 25. Aarohana taratamya sandhi
ಹರಿಕಥಾಮೃತಸಾರ 25 - ಆರೋಹಣ ತಾರತಮ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಭಕ್ತರೆನಿಸುವ ದಿವ್ಯ ಪುರುಷರ ಉಕ್ತಿ ಲಾಲಿಸಿ ಪೇಳ್ದ ಮುಕ್ತಾಮುಕ್ತ ಜೀವರ ತಾರತಮ್ಯವ ಮುನಿಪ ಶಾಂಡಿಲ್ಯ|| ಸ್ಥಾವರರ ನೋಡಲ್ಕೆ ತೃಣ ಕ್ರಿಮಿ ಜೀವರೋತ್ತಮ ಕ್ರಿಮಿಗಳಿಂದಲಿ ಆವಿ ಗೋ ಗಜ ವ್ಯಾಘ್ರಗಳಿಂದ ಶೂದ್ರಾದಿ ಮೂವರು ಉತ್ತಮ ಕರ್ಮಿಕರ ಭೂ ದೇವರು ಉತ್ತಮ ಕರ್ಮಿ ನೋಡಲು ಕೋವಿದ ಉತ್ತಮ ಕವಿಗಳಿಂದಲಿ ಕ್ಷಿತಿಪರು ಉತ್ತಮರು||1|| ಧರಣಿಪರ ನೋಡಲ್ಕೆ ನರ ಗಂಧರ್ವರು ಉತ್ತಮ ದೇವ ಗಂಧರ್ವರ ಗುಣೋತ್ತಮರು ಇವರಿಗಿಂತ ಶತೋನಶತಕೋಟಿ ಪರಮ ಋಷಿಗಳು ಅಪ್ಸರ ಸ್ತ್ರೀಯರು ಸಮಾನರು ಇವರಿಗಿಂತಲಿ ಚಿರಪಿತೃಗಳು ಉತ್ತಮರು ಚಿರನಾಮಕ ಪಿತೃಗಳಿಂದ||…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| Baktarenisuva divya puruShara ukti lAlisi pELda muktAmukta jIvara tAratamyava munipa SAnDilya|| sthAvarara nODalke tRuNa krimi jIvarOttama krimigaLiMdali Avi gO gaja vyAGragaLinda SUdrAdi mUvaru uttama karmikara BU dEvaru uttama karmi nODalu kOvida uttama kavigaLindali kShitiparu uttamaru||1|| dharaNi…