Haridasa Sahitya — Vyasadasa
Harikathamritasara 24 - 24. Kalpa sadhana sandhi/Aparoksha Taratamya sandhi
ಹರಿಕಥಾಮೃತಸಾರ 24 - ಕಲ್ಪಸಾಧನ/ಅಪರೋಕ್ಷ ತಾರತಮ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಏಕವಿಂಶತಿ ಮತ ಪ್ರವರ್ತಕ ಕಾಕು ಮಾಯ್ಗಳ ಕುಹಕ ಯುಕ್ತಿ ನಿರಾಕರಿಸಿ ಸರ್ವೋತ್ತಮನು ಹರಿಯೆಂದು ಸ್ಥಾಪಿಸಿದ ಶ್ರೀ ಕಳತ್ರನ ಸದನ ದ್ವಿಜಪ ಪಿನಾಕಿ ಸನ್ನುತ ಮಹಿಮ ಪರಮ ಕೃಪಾಕಟಾಕ್ಷದಿ ನೋಡು ಮಧ್ವಾಚಾರ್ಯ ಗುರುವರ್ಯ||1|| ವೇದ ಮೊದಲಾಗಿಪ್ಪ ಅಮಲ ಮೋಕ್ಷ ಅಧಿಕಾರಿಗಳು ಆದ ಜೀವರ ಸಾಧನಗಳ ಅಪರೋಕ್ಷ ನಂತರ ಲಿಂಗ ಭಂಗವನು ಸಾಧುಗಳು ಚಿತ್ತೈಪದು ಎನ್ನಪರಾಧಗಳ ನೋಡದಲೆ ಚಕ್ರ ಗದಾಧರನು ಪೇಳಿಸಿದ ತೆರದಂದದಲಿ ಪೇಳುವೆನು||2|| ತೃಣ ಕ್ರಿಮಿ ದ್ವಿಜ ಪಶು ನರೋತ್ತಮ ಜನಪ ನರಗಂಧರ್ವ ಗಣರು ಇವರೆನಿಪರು ಅಂಶ ವಿಹೀನ ಕರ್ಮ ಸುಯೋಗಿಗಳೆಂದು ತನು…
Transliteration
harikathAmRutasAra gurugaLa karuNadindApanitu kELuve/ parama BagavadBaktaru idanAdaradi kELuvudu|| EkaviMSati mata pravartaka kAku mAygaLa kuhaka yukti nirAkarisi sarvOttamanu hariyeMdu sthApisida SrI kaLatrana sadana dvijapa pinAki sannuta mahima parama kRupAkaTAkShadi nODu madhvAcArya guruvarya||1|| vEda modalAgippa amala mOkSha adhikArigaLu Ada jIvara sAdhanagaLa aparOkSha naMtara linga Bangava…