Haridasa Sahitya — Vyasadasa
Harikathamritasara 22 - 22. Bhaktaaparadhasahishnu sandhi
ಹರಿಕಥಾಮೃತಸಾರ 22 - ಭಕ್ತಾಪರಾಧಸಹಿಷ್ಣು ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀ ಲಕುಮಿವಲ್ಲಭಗೆ ಸಮ ಕರುಣಾಳುಗಳ ನಾಕಾಣೆನೆಲ್ಲಿ ಕುಚೇಲನ ಅವಲಿಗೆ ಮೆಚ್ಚಿ ಕೊಟ್ಟನು ಸಕಲ ಸಂಪದವ ಕೇಳಿದಾಕ್ಷಣ ವಸ್ತ್ರಗಳ ಪಾಂಚಾಲಿಗಿತ್ತನು ದೈತ್ಯನುದರವ ಸೀಳಿ ಸಂತೈಸಿದನು ಪ್ರಹ್ಲಾದನ ಕೃಪಾಸಾಂದ್ರ||1|| ದೇವಶರ್ಮಾಹ್ವಾಯ ಕುಟುಂಬಕೆ ಜೀವನೋಪಾಯವನು ಕಾಣದೆ ದೇವ ದೇವ ಶರಣ್ಯ ರಕ್ಷಿಸು ರಕ್ಷಿಸೆನೆ ಕೇಳಿ ತಾ ಒಲಿದು ಪಾಲಿಸಿದ ಸೌಖ್ಯ ಕೃಪಾವಲೋಕನದಿಂದ ಈತನ ಸೇವಿಸದೆ ಸೌಖ್ಯಗಳ ಬಯಸುವರು ಅಲ್ಪ ಮಾನವರು||2|| ಶ್ರೀನಿವಾಸನ ಪೋಲ್ವ ಕರುಣಿಗಳು ಈ ನಳಿನಜಾಂಡದೊಳು ಕಾಣೆ ಪ್ರವೀಣರಾದವರು ಅರಸಿ ನೋಳ್ಪುದು ಶೃತಿಪುರಾಣದೊಳು ದ್ರೋಣ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| SrI lakumivallaBage sama karuNALugaLa nAkANenelli kucElana avalige mecci koTTanu sakala saMpadava kELidAkShaNa vastragaLa pAncAligittanu daityanudarava sILi santaisidanu prahlAdana kRupAsAndra||1|| dEvaSarmAhvAya kuTuMbake jIvanOpAyavanu kANade dEva dEva SaraNya rakShisu rakShisene kELi tA olidu pAlis…