Haridasa Sahitya — Vyasadasa

Harikathamritasara 21 - 21. Karma vimochana sandhi

ಹರಿಕಥಾಮೃತಸಾರ 21 - ಕರ್ಮ ವಿಮೋಚನ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಮೂಲ ನಾರಾಯಣನು ಮಾಯಾ ಲೋಲ ಅನಂತ ಅವತಾರ ನಾಮಕ ವ್ಯಾಳ ರೂಪ ಜಯಾ ರಮಣನ ಆವೆಶನು ಎನಿಸುವನ ಲೀಲೆಗೈವ ಅನಂತ ಚೇತನ ಜಾಲದೊಳು ಪ್ರದ್ಯುಮ್ನ ಬ್ರಹ್ಮಾಂಡ ಆಲಯದ ಒಳ ಹೊರಗೆ ನೆಲೆಸಿಹ ಶಾಂತಿ ಅನಿರುದ್ಧ||1|| ಐದು ಕಾರಣ ರೂಪ ಇಪ್ಪತ್ತೈದು ಕಾರ್ಯಗಳು ಎನಿಸುವವು ಆರೈದು ರೂಪದಿ ರಮಿಸುತಿಪ್ಪನು ಈ ಚರಾಚರದಿ ಭೇದ ವರ್ಜಿತ ಮೂರ್ಜಗದ್ಜನ್ಮಾದಿ ಕಾರಣ ಮುಕ್ತಿದಾಯಕ ಸ್ವಉದರದೊಳಿಟ್ಟು ಎಲ್ಲರನು ಸಂತೈಪ ಸರ್ವಜ್ಞ||2|| ಕಾರ್ಯ ಕಾರಣ ಕರ್ತೃಗಳೊಳು ಸ್ವಭಾರ್ಯರಿಂದ ಒಡಗೂಡಿ ಕಪಿಲಾಚಾರ್ಯ ಕ್ರೀಡಿಸುತಿಪ್ಪ ತನ್ನೊಳು ತಾನೆ ಸ್ವೇಚ್ಚೆಯಲಿ ಪ್ರೇರ್ಯ…

Transliteration

harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| mUla nArAyaNanu mAyA lOla ananta avatAra nAmaka vyALa rUpa jayA ramaNana AveSanu enisuvana lIlegaiva ananta cEtana jAladoLu pradyumna brahmAnDa Alayada oLa horage nelesiha SAnti aniruddha||1|| aidu kAraNa rUpa ippattaidu kAryagaLu enisuvavu Araidu rUpadi ramisutippanu I carAcaradi BEda varjita mUrjaga…