Haridasa Sahitya — Vyasadasa

Harikathamritasara 18 - 18. Kreedavilasa sandhi

ಹರಿಕಥಾಮೃತಸಾರ 18 - ಕ್ರೀಡಾ ವಿಲಾಸ ಸಂಧಿ

Composer: Jagannatha Dasaru · Deity: Hari / Krishna · Genre: Philosophy

Kannada lyrics

ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಶ್ರೀನಿವಾಸನ ಚರಿತೆಗಳ ಪರಮಾನುರಾಗದಿ ಬೆಸೆಗೊಳಲು ಮುನಿ ಶೌನಕಾದ್ಯರಿಗೆ ಅರುಪಿದನು ಸೂತಾರ್ಯ ದಯದಿಂದ|| ಪಚನ ಭಕ್ಷಣ ಗಮನ ಭೋಜನ ವಚನ ಮೈಥುನ ಶಯನ ವೀಕ್ಷಣ ಅಚಲನಾ ಚಲನ ಪ್ರಯತ್ನದಿ ಸಾಧ್ಯವೇ ಜನಕೆ ಶುಚಿ ಸದನ ದಯದಿಂದ ಜೀವರ ನಿಚಯದೊಳು ತಾ ನಿಂತು ಮಾಡುವ ಉಚಿತಾನುಚಿತ ಕರ್ಮಗಳನೆಂದರಿದು ಕೊಂಡಾಡು||1|| ವಿಷ್ಟರ ಶ್ರವ ದೇಹದೊಳಗೆ ಪ್ರವಿಷ್ಟನಾಗಿ ನಿರಂತರದಿ ಬಹು ಚೇಷ್ಟೆಗಳ ಮಾಡುತಿರೆ ಕಂಡು ಸಜೀವಿಯೆನುತಿಹರು ಹೃಷ್ಟರಾಗುವರು ನೋಡಿ ಕನಿಷ್ಟರು ಎಲ್ಲರು ಸೇವೆ ಮಾಳ್ಪರು ಬಿಟ್ಟ ಕ್ಷಣದಲಿ ಕುಣಪ ಸಮವೆಂದರಿದು ಅನುಪೇಕ್ಷಿಪರು||2||…

Transliteration

SrInivAsana caritegaLa paramAnurAgadi besegoLalu muni SaunakAdyarige arupidanu sUtArya dayadinda|| pacana BakShaNa gamana BOjana vacana maithuna Sayana vIkShaNa acalanA calana prayatnadi sAdhyavE janake Suci sadana dayadinda jIvara nicayadoLu tA nintu mADuva ucitAnucita karmagaLanendaridu konDADu||1|| viShTara Srava dEhadoLage praviShTanAgi nirantaradi bahu cEShTegaLa mADutire kanDu sajIviyenutiha…