Haridasa Sahitya — Vyasadasa
Harikathamritasara 17 - 17. Swagathaswantrya sandhi
ಹರಿಕಥಾಮೃತಸಾರ 17 - ಸ್ವಗತಸ್ವಾತಂತ್ರ್ಯ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಸ್ವಗತಸ್ವಾತಂತ್ರ್ಯ ಗುಣವ ಹರಿ ತೆಗೆದು ಬ್ರಹ್ಮಾದ್ಯರಿಗೆ ಕೊಟ್ಟದು ಭೃಗು ಮುನಿಪ ಪೇಳಿದನು ಇಂದ್ರದ್ಯುಮ್ನ ಕ್ಷಿತಿಪನಿಗೆ|| ಪರಮ ವಿಷ್ಣು ಸ್ವತಂತ್ರ ಮಾಯಾ ತರುಣಿ ವಕ್ಷಸ್ಥಳ ನಿವಾಸಿ ಸರಸಿಜೋದ್ಭವ ಪ್ರಾಣರೀರ್ವರು ಸಚಿವರು ಎನಿಸುವರು ಸರ್ವ ಕರ್ಮಗಳಲ್ಲಿ ತತ್ಪ್ರಿಯರು ಉರಗ ಭೂಷಣ ಅಹಂಕೃತಿತ್ರಯ ಕರೆಸುವ ಅಮರೇಂದ್ರ ಅರ್ಕ ಮುಖರು ಇಂದ್ರಿಯಪರು ಎನಿಸುವರು||1|| ಈ ದಿವೌಕಸರ ಅಂತೆ ಕಲಿ ಮೊದಲಾದ ದೈತ್ಯರು ಸರ್ವ ದೇಹದಿ ತೋದಕರು ತಾವಾಗಿ ವ್ಯಾಪಾರಗಳ ಮಾಡುವರು ವೇಧನಾಂದದಿ ಕಲಿಯು ಅಹಂಕಾರಾಧಿಪ ಅಧಮ ಮಧುಕುಕೈಟಭ ಕ್ರೋಧಿಶಂಭರ ಮುಖರ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| svagatasvAtantrya guNava hari tegedu brahmAdyarige koTTadu BRugu munipa pELidanu indradyumna kShitipanige|| parama viShNu svatantra mAyA taruNi vakShasthaLa nivAsi sarasijOdBava prANarIrvaru sacivaru enisuvaru sarva karmagaLalli tatpriyaru uraga BUShaNa ahaMkRutitraya karesuva amarEndra arka muKaru iM…