Haridasa Sahitya — Vyasadasa
Harikathamritasara 13 - 13. Namasmarana sandhi
ಹರಿಕಥಾಮೃತಸಾರ 13 - ನಾಮಸ್ಮರಣ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ/ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಮಕ್ಕಳಾಡಿಸುವಾಗ ಮಡದಿಯೊಳು ಅಕ್ಕರದಿ ನಗುವಾಗ ಹಯ ಪಲ್ಲಕ್ಕಿ ಗಜ ಮೊದಲಾದ ವಾಹನಗಳು ಏರಿ ಮೆರೆವಾಗ ಬಿಕ್ಕುವಾಗ ಆಕಳಿಸುತಲಿ ದೇವಕ್ಕಿ ತನಯನ ಸ್ಮರಿಸುತಿಹ ನರ ಸಿಕ್ಕ ಯಮದೂತರಿಗೆ ಆವ ಆವಲ್ಲಿ ನೋಡಿದರು||1|| ಸಾರಿತು ಪ್ರವಹಗಳಲ್ಲಿ ದಿವ್ಯಾಂಬರದಿ ಪತ್ರಾದಿಯಲಿ ಹರುಷಾ ಮರುಷ ವಿಸ್ಮ್ರುತಿಯಂದಲಿ ಆಗಲಿ ಒಮ್ಮೆ ಬಾಯಿ ತೆರೆದು ಹರಿ ಹರೀ ಹರಿಯೆಂಬ ಎರಡಕ್ಷರ ನುಡಿದ ಮಾತ್ರದಲಿ ದುರಿತಗಳು ಇರದೇ ಪೋಪವು ತೂಲ ರಾಶಿಯೊಳು ಅನಲ ಪೊಕ್ಕಂತೆ||2|| ಮಲಗುವಾಗಲಿ ಏಳುವಾಗಲಿ ಕುಳಿತು ಮಾತಾಡುತಲಿ ಮನೆಯೊಳು ಕೆಲಸಗಳ ಮಾಡುತಲಿ ಮೈದೊಳೆವಾಗ ಮೆಲು…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| makkaLADisuvAga maDadiyoLu akkaradi naguvAga haya pallakki gaja modalAda vAhanagaLu Eri merevAga bikkuvAga AkaLisutali dEvakki tanayana smarisutiha nara sikka yamadUtarige Ava Avalli nODidaru||1|| sAritu pravahagaLalli divyAMbaradi patrAdiyali haruShA maruSha vismrutiyandali Agali omme bAyi teredu har…