Haridasa Sahitya — Vyasadasa
Harikathamritasara 12 - 12. Nadee prakarana Sandhi
ಹರಿಕಥಾಮೃತಸಾರ 12 - ನಾಡೀಪ್ರಕರಣ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ವಾಸುದೇವನು ಪ್ರಾಣಮುಖ ತತ್ವ ಈಶರಿಂದಲಿ ಸೇವೆ ಕೈಕೊಳುತ ಈ ಶರೀರದೊಳು ಇಪ್ಪ ಮೂವತ್ತಾರು ಸಾವಿರ ಈ ಸುನಾಡಿಗಳೊಳಗೆ ಈ ಭೂಮೀ ಸಮೇತ ವಿಹಾರಗೈವ ಪರ ಈಶನ ಅಮಲ ಸುಮೂರ್ತಿಗಳ ಚಿಂತಿಸುತ ಹಿಗ್ಗುತಿರು||1|| ಚರಣಗಳೊಳಿಹ ನಾಡಿಗಳು ಹನ್ನೆರೆಡು ಸಾವಿರ ಮಧ್ಯ ದೇಹದೊಳು ಇರುತಿಹವು ಹದಿನಾಲ್ಕು ಬಾಹುಗಳೊಳಗೆ ಈರೆರೆಡು ಶಿರದೊಳು ಆರು ಸಹಸ್ರ ಚಿಂತಿಸಿ ಇರುಳು ಹಗಲು ಅಭಿಮಾನಿ ದಿವಿಜರನರಿತು ಉಪಾಸನೆಗೈವರು ಇಳೆಯೊಳು ಸ್ವರ್ಗ ವಾಸಿಗಳು||2|| ಬೃಹತಿನಾಮಕ ವಾಸುದೇವನು ವಹಿಸಿ ಸ್ತ್ರೀ ರೂಪ ದೋಷ ವಿರಹಿತ ಎಪ್ಪತ್ತೆರೆಡು ಸಾವಿರ ನಾಡಿಗಳೊಳಗಿದ್…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| vAsudEvanu prANamuKa tatva ISarindali sEve kaikoLuta I SarIradoLu ippa mUvattAru sAvira I sunADigaLoLage I BUmI samEta vihAragaiva para ISana amala sumUrtigaLa cintisuta higgutiru||1|| caraNagaLoLiha nADigaLu hannereDu sAvira madhya dEhadoLu irutihavu hadinAlku bAhugaLoLage IrereDu SiradoLu Aru sahasr…