Haridasa Sahitya — Vyasadasa
Harikathamritasara 10 - 10. Sarva Pratheeka sandhi
ಹರಿಕಥಾಮೃತಸಾರ 10 - ಸರ್ವಪ್ರತೀಕ ಸಂಧಿ
Composer: Jagannatha Dasaru · Deity: Hari / Krishna · Genre: Philosophy
Kannada lyrics
ಹರಿಕಥಾಮೃತಸಾರ ಗುರುಗಳ ಕರುಣದಿಂದಾಪನಿತು ಕೇಳುವೆ ಪರಮ ಭಗವದ್ಭಕ್ತರು ಇದನಾದರದಿ ಕೇಳುವುದು|| ಆವ ಪರಬೊಮ್ಮನ ಅತಿವಿಮಲ ಅಂಗಾವ ಬದ್ಧರು ಎಂದೆನಿಪ ರಾಜೀವಭವ ಮೊದಲಾದ ಅಮರರು ಅನುದಿನದಿ ಹರಿಪದವ ಸೇವಿಪರಿಗೆ ಅನುಕೂಲರಲ್ಲದೆ ತಾವು ಇವರನು ಕೆಡಿಸಬಲ್ಲರೆ ಶ್ರೀವಿಲಾಸಾಸ್ಪದನ ದಾಸರಿಗೆ ಉಂಟೆ ಅಪಜಯವು||1|| ಶ್ರೀದನ ಅಂಘ್ರಿ ಸರೋಜಯುಗಳ ಏಕಾದಶ ಸ್ಥಾನ ಆತ್ಮದೊಳಗಿಟ್ಟು ಆದರದಿ ಸಂತುತಿಸಿ ಹಿಗ್ಗುವರಿಗೆ ಈ ನವಗ್ರಹವು ಆದಿತೇಯರು ಸಂತತಾಧಿ ವ್ಯಾಧಿಗಳ ಪರಿಹರಿಸುತ ಅವರನ ಕಾದುಕೊಂಡಿಹರು ಎಲ್ಲರೊಂದಾಗಿ ಈಶನ ಆಜ್ಞೆಯಲಿ||2|| ಮೇದಿನಿಯ ಮೇಲುಳ್ಳ ಗೋಷ್ಪಾದ ಉದಕಗಳು ಎಲ್ಲ ಆಮಲ ತೀರ್ಥವು ಪಾದಪಾದ್ರಿ ಧರಾತಳವೆ ಸುಕ್ಷೇತ್ರ ಜೀವಗಣ ಶ್ರೀ…
Transliteration
harikathAmRutasAra gurugaLa karuNadindApanitu kELuve parama BagavadBaktaru idanAdaradi kELuvudu|| Ava parabommana ativimala angAva baddharu endenipa rAjIvaBava modalAda amararu anudinadi haripadava sEviparige anukUlarallade tAvu ivaranu keDisaballare SrIvilAsAspadana dAsarige unTe apajayavu||1|| SrIdana anGri sarOjayugaLa EkAdaSa sthAna AtmadoLagiTTu Adaradi santutisi higguvarige I navagrahavu Adi…